ಸುಳ್ಯ: ಸುಳ್ಯದ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಅವರು ದೀಪ ಪ್ರಜ್ವಲನಗೈದು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ ,ಕಲಿಯುವ
ಹಂಬಲ,ಆತ್ಮವಿಶ್ವಾಸ ಜೊತೆಗಿರಬೇಕು.ಹೆತ್ತವರು, ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕೆ, ಪ್ರತಿಭೆ,ಸ್ವಯಂ ಶಿಸ್ತಿಗೆ ಮಾರ್ಗದರ್ಶನ, ಬೆಂಬಲ ನೀಡಬೇಕು.ಎಲ್ಲಾ ವಿದ್ಯಾರ್ಥಿಗಳು ಜ್ಞಾನದ ಸದುಪಯೋಗಪಡೆದುಕೊಳ್ಳಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ಮಾತನಾಡಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನೀತಿ -ನಿಯಮಗಳ ಕುರಿತು ತಿಳಿಸಿದರು .
ವಿದ್ಯಾರ್ಥಿನಿಯರಾದ ಆಜ್ಞ ಮತ್ತು ಬಳಗದವರು ಆಶಯ ಗೀತೆ ಹಾಡಿದರು.ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ. ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕಿ ವಿನುತ ಕೆ ಎನ್ ವಂದಿಸಿದರು. ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ನಿರೂಪಿಸಿದರು. ಉಪನ್ಯಾಸಕರು ಹೆಸರು, ಬೋಧಿಸುವ ವಿಷಯದ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ವೃಂದದವರು ಉಪಸ್ಥಿತರಿದ್ದರು.