ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.9 ರಂದು ಆರಂಭಗೊಂಡಿದ್ದು ದ.ಕ.ಜಿಲ್ಲೆಯ 52 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆದ ಒಟ್ಟು 242 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕನ್ನಡ ಪರೀಕ್ಷೆಗೆ ಹೆಸರು
ನೋಂದಾಯಿಸಿದ್ದ 19,385 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 19,169 ವಿದ್ಯಾರ್ಥಿಗಳು ಹಾಜರಾಗಿದ್ದರೆ, 216 ಮಂದಿ ಗೈರಾಗಿದ್ದಾರೆ. ಕನ್ನಡ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 120 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 94 ವಿದ್ಯಾರ್ಥಿಗಳು ಹಾಜರಾಗಿದ್ದರೆ, 26 ಮಂದಿ ಗೈರಾಗಿದ್ದಾರೆ. ಅರಬಿಕ್ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ 134 ವಿದ್ಯಾರ್ಥಿಗಳೆಲ್ಲರೂ ಹಾಜರಾಗಿದ್ದಾರೆ. ಪರೀಕ್ಷೆಗಳು
ಸುಸೂತ್ರವಾಗಿ ನಡೆದಿದೆ ಎಂದು ಡಿಡಿ ಪಿಯು ಮಾಹಿತಿ ನೀಡಿದ್ದಾರೆ.
ಮಾ.10ರಂದು ಯಾವುದೇ ಪರೀಕ್ಷೆ ನಡೆಯುವುದಿಲ್ಲ. ಮಾ.11ರಂದು ಗಣಿತ ಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರ ಪರೀಕ್ಷೆ ನಡೆಯಲಿದೆ.