ಸುಳ್ಯ:ಮಂಗಳೂರಿನ ಪಿ.ಎಸ್.ಆರ್.ಸಿಲ್ಕ್ ನವರ ಸಾರಿ ಮೇಳ ಸುಳ್ಯದಲ್ಲಿ ಆರಂಭಗೊಂಡಿದೆ. ಫೆ.27ರಂದು ಸಾರಿ ಮೇಳ ಆರಂಭವಾಗಿದ್ದು ಮಾ.1ರ ತನಕ ಮೂರು ದಿನಗಳ ಕಾಲ ಸುಳ್ಯದ ಜ್ಯೂನಿಯರ್ ಕಾಲೇಜು ರಸ್ತೆಯ ಲಯನ್ಸ್ ಸೇವಾ ಸದನದಲ್ಲಿ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ಶುಕ್ರವಾರ ಬೆಳಿಗ್ಗೆ ಸಾರಿ ಮೇಳ ಆರಂಭಗೊಂಡಿದ್ದು ಸಾರಿ

ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಮಂದಿ ಸಾರಿ ಮೇಳಕ್ಕೆ ಆಗಮಿಸಿ ಸಾರಿ ಖರೀದಿಯಲ್ಲಿ ತೊಡಗಿದ್ದಾರೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಸಾರಿ ಮೇಳ ಇರಲಿದೆ. ಅಪೂರ್ವ ಸಾರಿಗಳ ವರ್ಣ ಲೋಕ ತೆರೆದುಕೊಂಡಿದ್ದು ಸಾವಿರಾರು ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯುತಿದೆ. ಆಕರ್ಷಕ ಡಿಸ್ಕೌಂಟ್ನೊಂದಿಗೆ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್, ಸೆಲ್ವಾರ್ ಮೇಟೀರಿಯಲ್ಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಲಭ್ಯವಿದೆ. ಕೋಯಮತ್ತೂರಿನ ಪಿಎಸ್ಆರ್ ಸಿಲ್ಕ್ ಸಾರಿಗಳು ಕೂಡ ಇಲ್ಲಿ ಲಭ್ಯವಿದ್ದು ಕಡಿಮೆ ಬೆಲೆಗೆ ಬ್ರಾಂಡೆಡ್ ಸಾರಿಗಳನ್ನು ಖರೀದಿಸುವ ಅಪೂರ್ವ ಅವಕಾಶವಿದೆ.

ಸುಳ್ಯದ ಸಾರಿ ಪ್ರಿಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಈ ಹಿಂದೆ ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ ಸಾರೀಸ್ ಪ್ರದರ್ಶನ ಮತ್ತು ಮಾರಾಟ ನಡೆದ ಸಂದರ್ಭದಲ್ಲಿ ಸುಳ್ಯದ ಜನತೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಇದೀಗ ಮತ್ತೆ 3 ದಿನಗಳ ಸಾರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ.
ಲಯನ್ಸ್ ಸೇವಾ ಸದನಕ್ಕೆ ಬನ್ನಿ.. ಮರೀಬೇಡಿ.. ಫೆ.27 ರಿಂದ ಮಾ.1ರ ತನಕ ಕೇವಲ 3 ದಿನ ಮಾತ್ರ..!









