ಸುಳ್ಯ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ,
ಮೈಸೂರು ನಡೆಸಿದ ಎಂಎಸ್ಸಿ 2020-21 ರ ಜನವರಿ ಬ್ಯಾಚ್ ನ ಸೈಕಾಲಜಿ ವಿಭಾಗದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸಾವಿತ್ರಿ ಬಿ ಅವರು 6 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟಿಕೋತ್ಸವದ ವೇಳೆ ಇವರಿಗೆ ಪದವಿ ಪ್ರದಾನ ಮಾಡಲಾಗಿದೆ. ಪಿಯುಸಿ ವಿದ್ಯಾಭ್ಯಾಸದ ನಂತರ ನರ್ಸಿಂಗ್ ಕೋರ್ಸ್ ಪೂರೈಸಿ
ಸರಕಾರಿ ಉದ್ಯೋಗ ಪಡೆದ ಇವರು ಬಳಿಕ ಕರ್ತವ್ಯದಲ್ಲಿದ್ದಾಗಲೇ ದೂರ ಶಿಕ್ಷಣ ಮೂಲಕ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪೂರೈಸಿದ್ದಾರೆ. ಇವರು 2018 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿ, 2020 ರಲ್ಲಿ ಮಾನಸ ಎಜ್ಯುಕೇಶನ್
ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ ಶಿವಮೊಗ್ಗ ಇಲ್ಲಿ
ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ ಇನ್ಸೈ ಕಾಲಜಿಕಲ್ ಕೌನ್ಸಿಲ್ & ಗೈಡೆನ್ಸ್ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.ಪ್ರಸ್ತುತ ಕಾರ್ಮಿಕ ಇಲಾಖೆಯ ವಿಮಾ ಚಿಕಿತ್ಸಾಲಯ ಪುತ್ತೂರಿನಲ್ಲಿ ನರ್ಸಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿತ್ರಿ, ಕಳೆದ 20 ವರ್ಷಗಳಿಂದ ಕಾರ್ಮಿಕ
ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಸ್ತುತ ಇವರು ಸುಳ್ಯದ ದೇವಸ್ಯ ನಿವಾಸಿ. ಉಬರಡ್ಕಮಿತ್ತೂರಿನ ದಿ. ಲಿಂಗಪ್ಪ ಗೌಡ ಬೈತಡ್ಕ ಹಾಗೂ ಶೇಷಮ್ಮ ದಂಪತಿಯ ಪುತ್ರಿ.