ಬೆಂಗಳೂರು: ಶನಿವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಎರಡು ಪಂದ್ಯಗಳೂ ಟೈ ಆದವು. ಪಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ನಡುವಣ ನಡೆದ ದಿನದ ಮೊದಲ ಪಂದ್ಯವು 34–34ರಿಂದ ಸಮವಾಯಿತು. ಇನ್ನೊಂದು ಪಂದ್ಯದಲ್ಲಿ
ಗುಜರಾತ್ ಟೈಟನ್ಸ್ ಹಾಗೂ ತಮಿಳ್ ತಲೈವಾಸ್ 31–31ರಿಂದ ಸಮಬಲ ಸಾಧಿಸಿದವು. ದಿನದ ಕೊನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 41–33 ರಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.
ಇಂದಿನ ಪಂದ್ಯಗಳು: ಜೈಪುರ್ ಪಿಂಕ್ ಪ್ಯಾಂಥರ್ಸ್–ಪಟ್ನಾ ಪೈರೆಟ್ಸ್ (ರಾತ್ರಿ 7.30); ತೆಲುಗು ಟೈಟನ್ಸ್–ಬೆಂಗಾಲ್ ವಾರಿಯರ್ಸ್ (ರಾತ್ರಿ 8.30)
ಪುಣೇರಿ ಪಲ್ಟನ್–ಬೆಂಗಳೂರು ಬುಲ್ಸ್ (ರಾತ್ರಿ 9.30)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಹಾಟ್ಸ್ಟಾರ್