ಹೈದರಾಬಾದ್: ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಸೆಮಿಫೈನಲ್ ಪ್ರವೇಶಿಸಿದವು.
ಗಚ್ಚಿಬೌಲಿಯ ಜಿಎಂಸಿ ಬಾಲಯೋಗಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಎಲಿಮಿನೇಟರ್ ಪಂದ್ಯಗಳಲ್ಲಿ
ದಬಂಗ್ ಡೆಲ್ಲಿ ವಿರುದ್ಧ ಪಟ್ನಾ ಪೈರೇಟ್ಸ್ 37–35ರಲ್ಲಿ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 42–25ರಲ್ಲಿ ಜಯ ಸಾಧಿಸಿತು. ಲೀಗ್ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್ ಸೆಮಿ ಫೈನಲ್ ಪ್ರವೇಶಿಸಿತು.
ಸೆಮಿ ಫೈನಲ್ನಲ್ಲಿ ಪುಣೇರಿ ಪಲ್ಟನ್–ಪಟ್ನಾ ಪೈರೇಟ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್–ಹರಿಯಾಣ ಸ್ಟೀಲರ್ಸ್ ಮಧ್ಯೆ ಪಂದ್ಯ ನಡೆಯಲಿದೆ.