ಬೆಂಗಳೂರು: ಪ್ರೊ ಕಬಡ್ಡಿ ಪಂದ್ಯಾವಳಿ ಶುಕ್ರವಾರದಿಂದ ಆರಂಭವಾಗಲಿದೆ. ಶ್ರೀ ಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ವೇದಿಕೆ ಪ್ರೊ ಕಬಡ್ಡಿ ಹಬ್ಬಕ್ಕೆ ಸಜ್ಜಾಗಿದೆ.ಈ ಬಾರಿ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ.ಒಟ್ಟು 12 ತಂಡಗಳು ಆಡಲಿವೆ. ಟೂರ್ನಿಯು ಡಬಲ್ ರೌಂಡ್‌ರಾಬಿನ್ ಲೀಗ್ ಹಾಗೂ ಪ್ಲೇ ಆಫ್ ಮಾದರಿಯಲ್ಲಿ ನಡೆಯಲಿದೆ.ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ
ಚಾಂಪಿಯನ್ ದಬಂಗ್ ಡೆಲ್ಲಿ ತಂಡವು ಯುಮುಂಬಾ ಬಳಗವನ್ನು ಎದುರಿಸಲಿದೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ತೆಲುಗು ಟೈಟನ್ಸ್ ಎದುರು ತನ್ನ ಅಭಿಯಾನ ಆರಂಭಿಸಲಿದೆ. 12 ತಂಡಗಳು ಭಾಗವಹಿಸಲಿವೆ. ಗುಜರಾತ್ ಜೈಂಟ್ಸ್, ತೆಲುಗು ಟೈಟನ್ಸ್, ಹರಿಯಾಣ ಸ್ಟೀಲರ್ಸ್, ಯುಪಿ ಯೋಧಾಸ್,ತಮಿಳ್ ತಲೈವಾಸ್,ಯುಮುಂಬಾ, ಜೈಪುರ್ ಪಿಂಕ್ ಪ್ಯಾಂಥರ್ಸ್, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಪಟ್ನಾ ಪೈರೆಟ್ಸ್,ಪುಣೇ ಪಲ್ಟನ್–ಸ್ಟಾರ್ ಪ್ಲೆಯರ್, ದಬಂಗ್ ಡೆಲ್ಲಿ ತಂಡಗಳು ಸೆಣಸಲಿವೆ. ಅ.7ರಿಂದ 23ರವರೆಗಿನ ಪಂದ್ಯಗಳು ಬೆಂಗಳೂರಿನಲ್ಲಿ ಹಾಗೂ ಅ 23 ರಿಂದ ನ 6ರವರೆಗೆ ಪುಣೆಯಲ್ಲಿ ನಡೆಯಲಿವೆ.
ಇಂದಿನ ಪಂದ್ಯಗಳು
ದಬಂಗ್ ಡೆಲ್ಲಿ– ಯು ಮುಂಬಾ (ರಾತ್ರಿ 7.30ರಿಂದ)
ಬೆಂಗಳೂರು ಬುಲ್ಸ್–ತೆಲುಗು ಟೈಟನ್ಸ್ (ರಾತ್ರಿ 8.30ರಿಂದ)
ಜೈಪುರ ಪಿಂಕ್‌ಪ್ಯಾಂಥರ್ಸ್– ಯು.ಪಿ. ಯೋಧಾ (ರಾತ್ರಿ 9.30)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್