ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ
ದಬಂಗ್ ಡೆಲ್ಲಿ ತಂಡವು ಸೋಮವಾರ ಪಂದ್ಯದಲ್ಲಿ ಜಯ ಗಳಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ತಂಡವು 53–33ರಿಂದ ಗುಜರಾತ್ ಜೈಂಟ್ಸ್ ಎದುರು
ಜಯಭೇರಿ ಬಾರಿಸಿತು. ಡೆಲ್ಲಿ ತಂಡದ ನಾಯಕ ನವೀನಕುಮಾರ್ 15 ಅಂಕಗಳನ್ನು ಗಳಿಸಿದರು. ಡೆಲ್ಲಿಗೆ ಇದು ಎರಡನೇ ಜಯವಾಗಿದೆ.ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡವು ಯುಪಿ ಯೋಧಾ ವಿರುದ್ಧ 30–23ರಿಂದ ಗೆದ್ದಿತು. ಮುಂಬಾ ತಂಡಕ್ಕೆ ಇದು ಎರಡನೇ ಪಂದ್ಯ ಹಾಗೂ ಮೊದಲ ಜಯವಾಗಿದೆ.
ಇಂದಿನ ಪಂದ್ಯಗಳು: ಹರಿಯಾಣ ಸ್ಟೀಲರ್ಸ್–ತಮಿಳ್ ತಲೈವಾಸ್ (ರಾತ್ರಿ 7.30) ಪಟ್ನಾ ಪೈರೆಟ್ಸ್–ತೆಲುಗು ಟೈಟನ್ಸ್ (ರಾತ್ರಿ 8.30)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್, ಹಾಟ್ಸ್ಟಾರ್ ಆ್ಯಪ್