ಬೆಂಗಳೂರು: ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಡೆಲ್ಲಿ ದಬಾಂಗ್ ತಂಡವು ಮೂರನೇ ಜಯ ದಾಖಲಿಸಿತು. ರೋಚಕ ಪಂದ್ಯದಲ್ಲಿ ಡೆಲ್ಲಿ ತಂಡವು ಯುಪಿ ಯೋಧಾಸ್ ವಿರುದ್ಧ 44-42 ಅಂತರದಲ್ಲಿ ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವು ಬೆಂಗಾಲ್ ವಾರಿಯರ್ಸ್ ವಿರುದ್ಧ ಸೋಲನುಭವಿಸಿತು. 42-33 ಅಂಕಗಳಿಂದ ಬೆಂಗಾಲ್ ವಾರಿಯರ್ ಜಯ ಗಳಿಸಿತು.
ಡೆಲ್ಲಿ ಆಡಿದ ಮೂರು ಪಂದ್ಯ ಗೆದ್ದರೆ ಬೆಂಗಳೂರು ಎರಡು ಗೆದ್ದು ಒಂದು ಪಂದ್ಯ ಸೋತಿದೆ.