ಪುಣೆ:ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಗೆಲುವು.ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ 47–43 ಪಾಯಿಂಟ್ಸ್‌ಗಳಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು. ಎಂಟು ಪಂದ್ಯಗಳಲ್ಲಿ ಐದನೇ ಗೆಲುವು ಪಡೆದ ಬುಲ್ಸ್, ಪಾಯಿಂಟ್ಸ್ ಪಟ್ಟಿಯಲ್ಲಿ
ಅಗ್ರಸ್ಥಾನಕ್ಕೇರಿತು. ಬೆಂಗಳೂರು ತಂಡಕ್ಕೆ ಮಿಂಚಿನ ಪ್ರದರ್ಶನ ನೀಡಿದ ಭರತ್ 20 ಪಾಯಿಂಟ್ಸ್ ಗಳಿಸಿದರು.
ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ದಬಾಂಗ್ ತಂಡ ಸತತ ಮೂರನೇ ಸೋಲು ಅನುಭವಿಸಿ, ಎರಡನೇ ಸ್ಥಾನಕ್ಕೆ ಕುಸಿತ ಕಂಡಿತು.ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 30–19 ರಲ್ಲಿ ತೆಲುಗು ಟೈಟನ್ಸ್ ತಂಡವನ್ನು ಪರಾಭವಗೊಳಿಸಿತು.
ಇಂದಿನ ಪಂದ್ಯಗಳು:
ಬೆಂಗಳೂರು ಬುಲ್ಸ್– ಜೈಪುರ ಪಿಂಕ್ ಪ್ಯಾಂಥರ್ಸ್
ತಮಿಳ್ ತಲೈವಾಸ್– ದಬಾಂಗ್ ಡೆಲ್ಲಿ