ಬೆಂಗಳೂರು: ಆತಿಥೇಯ ಬೆಂಗಳೂರು ಬುಲ್ಸ್ ತಂಡವು ಶುಕ್ರವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜಯದೊಂದಿಗೆ ಶುಭಾರಂಭ ಮಾಡಿತು. ಶ್ರೀಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 34–29ರಿಂದ
ತೆಲುಗು ಟೈಟನ್ಸ್ ತಂಡವನ್ನು ಪರಾಭವಗೊಳಿಸಿತು ಒಟ್ಟು ಏಳು ಅಂಕ ಗಳಿಸಿ ಮಿಂಚಿದ ನೀರಜ್, ತಲಾ ಐದು ಅಂಕ ಗಳಿಸಿದ ಖಂಡೋಲಾ ಮತ್ತು ಭರತ್ ಬುಲ್ಸ್ ತಂಡಕ್ಕೆ ಬಲ ತುಂಬಿದರು. ಬಲಿಷ್ಠ ರಕ್ಷಣಾ ತಂತ್ರ ಹೆಣೆದ ಡಿಫೆಂಡರ್ ಮಹೇಂದರ್ ಕೂಡ ನಾಲ್ಕು ಅಂಕ ಗಳಿಸಿದರು. ಅವರಿಗೆ ಲೆಫ್ಟ್ ಕಾರ್ನರ್ ಡಿಫೆಂಡರ್ ಸೌರಭ್ ನಂದಾಲ್ (4) ಕೂಡ ಉತ್ತಮ ಜೊತೆ ನೀಡಿದರು. ಟೈಟನ್ಸ್ ಪರವಾಗಿ ರಜನೀಶ್ ಏಳು ಅಂಕ ಗಳಿಸಿದರು.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿತು.
ಡೆಲ್ಲಿ ತಂಡದ ನಾಯಕ ನಾಯಕ ನವೀನ್ ಚುರುಕಿನ ದಾಳಿ ನಡೆಸಿದರು. ಅವರು 13 ಅಂಕಗಳನ್ನು ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ಜೈಪುರ್ ಪಿಂಕ್ ಪಂಥರ್ಸ್ ತಂಡವನ್ನು 34-32 ಅಂತರದಲ್ಲಿ ಸೋಲಿಸಿ ಶುಭಾರಂಭ ಮಾಡಿತು. ವೀಕ್ಷಕರಿಗೆ ಈ ಬಾರಿ ಅವಕಾಶ ನೀಡಲಾಗಿತ್ತು.