ಕೊಚ್ಚಿ: ಅಹಮ್ಮದಾಬಾದ್ ಡಿಪೆಂಡರ್ಸ್ ತಂಡ
ಎರಡನೇ ಆವೃತ್ತಿಯ ಪ್ರೈಂ ವಾಲಿಬಾಲ್ ಟೂರ್ನಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಕೊಚ್ಚಿಯಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್ನ ಫೈನಲ್ನಲ್ಲಿ ಬೆಂಗಳೂರು ಟೋರ್ಪಿಡೋಸ್ ತಂಡವನ್ನು 3-2 ಸೆಟ್ಗಳ
ಅಂತರದಲ್ಲಿ ಸೋಲಿಸಿ ಮುತ್ತುಸ್ವಾಮಿ ನಾಯಕತ್ವದ ಡಿಪೆಂಡರ್ಸ್ ತಂಡ ಕಪ್ ಎತ್ತಿದೆ. ಸ್ಕೋರ್:15-7, 15-10, 18-20, 13-15, 15-10. ತೀವ್ರ ಪೈಪೋಟಿಯಿಂದ ಕೂಡಿದ ಫೈನಲ್ ಪಂದ್ಯದಲ್ಲಿ ಮೊದಲ ಎರಡು ಸೆಟ್ಗಳನ್ನು ಗೆದ್ದು ಅಹಮ್ಮದಾಬಾದ್ ಮುನ್ನಡೆ ಗಳಿಸಿತು. ಆದರೆ 3 ಮತ್ತು ನಾಲ್ಕನೇ ಸೆಟ್ ಗೆದ್ದ ಬೆಂಗಳೂರು ತಿರುಗಿ ಬಿದ್ದಿತ್ತು. ಆದರೆ ನಿರ್ಣಾಯಕವಾದ ಐದನೇ ಸೆಟ್ ಗೆಲ್ಲುವ ಮೂಲಕ ಅಹಮ್ಮದಾಬಾದ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಹಮ್ಮದಾಬಾದ್ನ ಅಂಗಮುತ್ತು ರಾಮಸ್ವಾಮಿ ಪ್ಲೆಯರ್ ಆಫ್ ದಿ ಮ್ಯಾಚ್ ಆಗಿ ಆಯ್ಕೆಯಾದರು.