ಕೊಚ್ಚಿ: ಬೆಂಗಳೂರು ಟೋರ್ಪಿಡೋಸ್ ಪ್ರೈಮ್ ವಾಲಿಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ.ಕೊಚ್ಚಿಯಲ್ಲಿ ನಡೆಯುತ್ತಿರುವ ಎರಡನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್ನ ಮೊದಲ ಸೆಮಿಫೈನಲ್ನಲ್ಲಿ ಬೆಂಗಳೂರು ಟೋರ್ಪಿಡೋಸ್ ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾ ತಂಡರ್ಬೋಲ್ಟ್ ತಂಡವನ್ನು 3-1 ಸೆಟ್ಗಳಲ್ಲಿ ಮಣಿಸಿ ಫೈನಲ್
ಪ್ರವೇಶಿಸಿತು. ಸ್ಕೋರ್ 15-13, 10-15, 15-13, 15-10. ಮೊದಲ ಸೆಟ್ನಲ್ಲಿ ತೀವ್ರ ಪೈಪೋಟಿ ನೀಡಿ ಎರಡೂ ತಂಡಗಳು ಸಮಬಲದಲ್ಲಿ ಸಾಗಿದವು. ಸ್ಕೋರ್ 10-10 ಎಂದು ಸಮಬಲ ಆಗಿತ್ತು. ಆದರೆ ಕೊನೆ ಕ್ಷಣದಲ್ಲಿ ಭರ್ಜರಿ ಹೊಡೆತಗಳ ಮೂಲಕ ಮೊದಲ ಸೆಟ್ಟನ್ನು ಬೆಂಗಳೂರು15-10 ಅಂತರದಲ್ಲಿ ಗೆದ್ದುಕೊಂಡಿತು. ಎರಡನೇ ಸೆಟ್ನ್ನು ಅದ್ಭುತ ಆಟದ ಮೂಲಕ 15-10 ಅಂತರದಲ್ಲಿ ಕೋಲ್ಕತ್ತಾ ಗೆದ್ದು ಕೊಂಡಿತು. ಆದರೆ 3 ಮತ್ತು 4ನೇ ಸೆಟ್ನಲ್ಲಿ ಗೆಲ್ಲುವ ಮೂಲಕ ಬೆಂಗಳೂರು ಫೈನಲ್ ಎಂಟ್ರಿ ಖಚಿತಪಡಿಸಿಕೊಂಡಿತು. ಇಂದು ನಡೆಯುವ ಎರಡನೇ ಸೆಮಿ ಫೈನಲ್ನಲ್ಲಿ ಕ್ಯಾಲಿಕಟ್ ಹೀರೋಸ್ ತಂಡ ಅಹಮ್ಮದಾಬಾದ್ ಡಿಪೆಂಡರ್ಸ್ ತಂಡವನ್ನು ಎಸುರಿಸಲಿದೆ.ಮಾ.5ರಂದು ಫೈನಲ್ ನಡೆಯಲಿದೆ. ಈ ಬಾರಿಯ ಪ್ರೈಮ್ ವಾಲಿಬಾಲ್ ಲೀಗ್ ಪಂದ್ಯಗಳು ಬೆಂಗಳೂರು, ಹೈದರಾಬಾದ್ ಹಾಗು ಕೊಚ್ಚಿಯಲ್ಲಿ 3 ಹಂತಗಳಲ್ಲಿ ನಡೆದಿದೆ.