ಸುಳ್ಯ:ಸದಾ ಒತ್ತಡದಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿ ದೇಹ ಮತ್ತು ಮನಸ್ಸು ಸದಾ ಉಲ್ಲಸಿತವಾಗಿರಿಸಲು ಕ್ರೀಡೆ ಸಹಕಾರಿ ಎಂದು ಬೀಜದಕಟ್ಟೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಹೇಳಿದ್ದಾರೆ.ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ಸದಸ್ಯರಿಗಾಗಿ ಹಮ್ಮಿಕೊಂಡ
ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಕರಾದ ನಟರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಶಿವರಾಜ್ ಗಾಯಕ್ವಾಡ್, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್ ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ನಿರ್ದೇಶಕರಾದ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ದುರ್ಗಾಕುಮಾರ್ ನಾಯರ್ಕೆರೆ ವಂದಿಸಿದರು. ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೆಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ ಉಪಸ್ಥಿತರಿದ್ದರು. ನಿರ್ದೇಶಕರಾದ ಗಿರೀಶ್ ಅಡ್ಪಂಗಾಯ ಯಶ್ವಿತ್ ಕಾಳಮನೆ, ಹಸೈನಾರ್ ಜಯನಗರ, ದಯಾನಂದ ಕಲ್ನಾರ್, ಸತೀಶ್ ಹೊದ್ದೆಟ್ಟಿ, ಮಿಥುನ್ ಕರ್ಲಪಾಡಿ ಸಹಕರಿಸಿದರು.

ಪಂದ್ಯಾಟದ ವಿಜೇತರು:
ಪ್ರೆಸ್ ಕ್ಲಬ್ ಸದಸ್ಯರಿಗಾಗಿ ಹಮ್ಮಿಕೊಂಡ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಶಿವರಾಮ ಕಜೆಮೂಲೆ ಪ್ರಥಮ, ಅನಿಲ್ ಕಳಂಜ ದ್ವಿತೀಯ ಪ್ರಶಸ್ತಿ ಪಡೆದರು. ಪುರುಷರ ಡಬಲ್ಸ್ನಲ್ಲಿ ಅನಿಲ್ ಕಳಂಜ ಹಾಗೂ ಶ್ರೀಧರ ಕಜೆಗದ್ದೆ ತಂಡ ಪ್ರಥಮ ಮತ್ತು ಗಂಗಾಧರ ಕಲ್ಲಪಳ್ಳಿ ಹಾಗೂ ಶರೀಫ್ ಜಟ್ಟಿಪಳ್ಳ ತಂಡ ದ್ವಿತೀಯ ಪ್ರಶಸ್ತಿ ಪಡೆದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಜಯಶ್ರೀ ಕೊಯಿಂಗೋಡಿ ಪ್ರಥಮ ಹಾಗೂ ಪ್ರಜ್ಞಾ ಎಸ್.ನಾರಾಯಣ ಅಚ್ರಪ್ಪಾಡಿ ದ್ವಿತೀಯ ಪ್ರಶಸ್ತಿ ಪಡೆದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.