ಅಜ್ಜಾವರ:ಸುಳ್ಯ ಪ್ರೆಸ್ ಕ್ಲಬ್ ವತಿಯಿಂದ ಕೆಸರೋತ್ಸವ ಮತ್ತು ಪತ್ರಕರ್ತರ ಕೆಸರುಗದ್ದೆ ಕವಿಗೋಷ್ಠಿ ಕಾರ್ಯಕ್ರಮ ಅಜ್ಜಾವರ ಗ್ರಾಮದ ಕೊರಂಗುಬೈಲು ಗದ್ದೆಯಲ್ಲಿ ನಡೆಯಿತು. ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಅಜ್ಜಾವರ ಗ್ರಾಮ ಪಂಚಾಯತ್
ಅಧ್ಯಕ್ಷೆ ದೇವಕಿ ಕಾಟಿಪಳ್ಳ, ಸಂಕೇಶ್ ಫೌಂಡೇಶನ್ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್,ಕೊರಂಗು ಬಯಲು ಗದ್ದೆಯ ಮಾಲಕರಾದ ಬಾಲಕೃಷ್ಣ ನಾಯ್ಕ್, ಗೋಪಾಲ್ ಸ್ಟುಡಿಯೋ ನವೀನ್ ಆಚಾರ್ಯ ಕೇರ್ಪಳ, ಅಜ್ಜಾವರ ಪ್ರತಾಪ ಯುವಕ ಮಂಡಲದ ಅಧ್ಯಕ್ಷ ಗುರುರಾಜ್ ಅಜ್ಜಾವರ, ಫಾಸ್ಟ್ರಾಕ್ನ ಶೈಮು, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಹರೀಶ್ ಬಂಟ್ವಾಳ್, ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೆಸರೋತ್ಸವ ಕಾರ್ಯಕ್ರಮದ ಸಂಚಾಲಕ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೆಸ್ ಕ್ಲಬ್ ಕೋಶಾಧಿಕಾರಿ ಈಶ್ವರ ವಾರಣಾಸಿ ಸ್ವಾಗತಿಸಿ, ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ವಂದಿಸಿ, ರಮೇಶ್ ನೀರಬಿದ್ರೆ ಕಾರ್ಯಕ್ರಮ ನಿರೂಪಿಸಿದರು.ಗೋಪಾಲ್ ಸ್ಟುಡಿಯೋ ನವೀನ್ ಆಚಾರ್ಯ ಕೇರ್ಪಳ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಕೆಸರು ಗದ್ದೆಯಲ್ಲಿ ಪ್ರಸ್ ಕ್ಲಬ್ ಸದಸ್ಯರಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಶಿವಪ್ರಸಾದ್ ಆಲೆಟ್ಟಿ, ಲೋಕೇಶ್ ಪೆರ್ಲಂಪಾಡಿ ನಿರೂಪಿಸಿದರು.

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ಬಹುಮಾನ ವಿತರಿಸಿದರು. ಸುಳ್ಯ ಎಸ್ಐ ಸಂತೋಷ್ ಬಿ.ಪಿ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್, ದ.ಕ.ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಸಾಂದೀಪ್ ಶಾಲೆಯ ಅಧ್ಯಕ್ಷ
ಎಂ.ಬಿ. ಸದಾಶಿವ, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ, ಸ್ವರ್ಣಂ ಜುವೆಲ್ಸ್ನ ಪಾಲುದಾರರಾದ ಪ್ರವೀಣ್ ಡಿ ಗೌಡ, ಸಂಜೀವ, ಅಜ್ಜಾವರ ಎಲ್.ಎಸ್. ಕ್ಯಾಟರಿಂಗ್ನ ಲತೀಫ್, ವಾವಾ ಸಿಲ್ಕ್ಸ್ನ ಮಾಲಕ ಯೂಸುಫ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು.

ಕೆಸರು ಗದ್ದೆಯಲ್ಲಿ ಕವಿಗೋಷ್ಠಿ:
ಕೆಸರೋತ್ಸವದ ಅಂಗವಾಗಿ ಕೆಸರುಗದ್ದೆಯಲ್ಲಿ ಪತ್ರಕರ್ತರ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಜಾನಪದ ಸಂಶೋಧಕ, ಸಾಹಿತಿ ಡಾ. ಸುಂದರ ಕೇನಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮನುಷ್ಯನ ಬದುಕು, ಸಂಸ್ಕೃತಿಯಲ್ಲಿ ಗದ್ದೆ, ಭತ್ತದ ಮಹತ್ವವನ್ನು ವಿವರಿಸಿದರು.
ಮೈಸೂರಿನ ಅರಿವು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಸಿ.ಮನೋಹರ್ ಅತಿಥಿಯಾಗಿದ್ದರು. ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ,ಕೋಶಾಧಿಕಾರಿ
ಈಶ್ವರ ವಾರಣಾಸಿ, ಕೆಸರೋತ್ಸವ ಕಾರ್ಯಕ್ರಮದ ಸಂಚಾಲಕ ಕೃಷ್ಣ ಬೆಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತರು ಸ್ವರಚಿತ ಕವನ ವಾಚಿಸಿದರು ಪ್ರೆಸ್ ಕ್ಲಬ್ ನಿರ್ದೇಶಕ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.





