ಸುಳ್ಯ: ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡದ ಮೇಲಂತಸ್ತಿನ ಕಾಮಗಾರಿಗೆ ನಿವೃತ್ತ ಸರ್ಕಾರಿ ಅಧಿಕಾರಿ ಇಬ್ರಾಹಿಂ ಗೂನಡ್ಕ ಹಾಗೂ ಅವರ ಸಹೋದರ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕರವರು ತಮ್ಮ ಕುಟುಂಬಸ್ಥರ ಪರವಾಗಿ
25,000 ರೂ.ಗಳ ದೇಣಿಗೆ ನೀಡಿದ್ದಾರೆ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 25 ನೇ ವರ್ಷದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟ್ಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ನಿರ್ದೇಶಕ ಗಂಗಾಧರ ಮಟ್ಟಿ ಅವರಿಗೆ ಮಹಮ್ಮದ್ ಕುಂಞಿ ಗೂನಡ್ಕ ಹಾಗೂ ಕೆ.ಪಿ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕರವರು ಅವರು ದೇಣಿಗೆ ಹಸ್ತಾಂತರಿಸಿದರು.