ಕಲ್ಲಪಳ್ಳಿ:ಕಲ್ಲಪಳ್ಳಿಯ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ದಿ.ಮೋನಪ್ಪ ಗೌಡ ನೆಡ್ಚಿಲು ಮೂಲೆಹಿತ್ಲು ಇವರ ಸ್ಮರಣಾರ್ಥ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಮಾ.11ರಂದು ಸಂಜೆ 6 ಗಂಟೆಯಿಂದ ಕಲ್ಲಪಳ್ಳಿಯ ಪ್ರೀತಿ ಮೈದಾನದಲ್ಲಿ ನಡೆಯಲಿದೆ. ಪ್ರಥಮ

ಬಹುಮಾನವಾಗಿ ರೂ.20,001 ಮತ್ರು ಶಾಶ್ವತ ಫಲಕ, ದ್ವಿತೀಯ ಬಹುಮಾನ 15,001 ಮತ್ತು ಶಾಶ್ವತ ಫಲಕ ನೀಡಲಾಗುವುದು. ಸೆಮಿ ಫೈನಲ್ ನಿರ್ಗಮಿತ ತಂಡಗಳಿಗೆ 5001 ರೂ ಹಾಗು ಶಾಶ್ವತ ಫಲಕ ನೀಡಲಾಗುವುದು. ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ,ಸರ್ವಾಂಗೀಣ ಆಟಗಾರ ಪ್ರಶಸ್ತಿ ನೀಡಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಸಂಜೆ 6 ಗಂಟೆಯ ಮೊದಲು ಹೆಸರು ನೋಂದಾಯಿಸಬೇಕು ಎಂದು ಪ್ರೀತಿ ಕಲಾ ಮತ್ತು ಕ್ರೀಡಟ ಸಂಘದ ಪ್ರಕಟಣೆ ತಿಳಿಸಿದೆ.