ಕಲ್ಲಪಳ್ಳಿ:ಕಲ್ಲಪಳ್ಳಿಯ ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ವತಿಯಿಂದ ದಿ.ಮೋನಪ್ಪ ಗೌಡ ನೆಡ್ಚಿಲು ಮೂಲೆಹಿತ್ಲು ಇವರ ಸ್ಮರಣಾರ್ಥ ಹೊನಲು ಬೆಳಕಿನ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟ ಮಾ.11ರಂದು ನಡೆಯಿತು. ಪ್ರೀತಿ ಮೈದಾನದಲ್ಲಿ ನಡೆದ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಮಾತೃಶ್ರೀ ಕಲ್ಲಪಳ್ಳಿ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಎನ್ಎಂಸಿ ಸುಳ್ಯ ಪಡೆದುಕೊಂಡಿತು. ಪ್ರಥಮ ಬಹುಮಾನವಾಗಿ
ರೂ.20,001 ಮತ್ರು ಶಾಶ್ವತ ಫಲಕ, ದ್ವಿತೀಯ ಬಹುಮಾನ 15,001 ಮತ್ತು ಶಾಶ್ವತ ಫಲಕ ನೀಡಲಾಯಿತು. ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ 5001 ರೂ ಹಾಗು ಶಾಶ್ವತ ಫಲಕ ನೀಡಲಾಯಿತು. ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ,ಸರ್ವಾಂಗೀಣ ಆಟಗಾರ ಪ್ರಶಸ್ತಿ ವಿತರಿಸಲಾಯಿತು.

ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಪಂದ್ಯಾ ಕೂಟವನ್ನು ಉದ್ಘಾಟಿಸಿದರು. ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕಲ್ಲಪಳ್ಳಿ, ಹಿರಿಯ ವಕೀಲರಾದ ಎ.ಸಿ.ನಂದನ್, ಎಡಿಎಸ್ ಅಧ್ಯಕ್ಷೆ ನಳಿನಾಕ್ಷಿ, ಪ್ರೀತಿ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ಮಹೇಶ್ ಗರುಗುಂಜ, ಕಾರ್ಯದರ್ಶಿ ವಸಂತ ಎಂ.ಎಂ. ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ ಡಿ.ಎಲ್.ಜಯರಾಮ, ಎಂ.ಟಿ.ಬಾಬಣ್ಣ, ಜಯಪ್ರಕಾಶ್ ಎನ್.ಕೆ, ಪ್ರದೀಪ್ ಮೂಲೆಹಿತ್ಲು, ತೀರ್ಥಕುಮಾರ ಆಲುಗುಂಜ, ಶುಭಕುಮಾರ ಆಲುಗುಂಜ, ಪ್ರವೀಣ್ ಆಲುಗುಂಜ, ಪ್ರಕಾಶ್ ಕುಂಚಡ್ಕ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲಾ ವಿಭಾಗದ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ ಕಲ್ಲಪಳ್ಳಿಯ ಅನುಷಾ ಭಾಸ್ಕರ್ರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿಜೆ ವಿಖ್ಯಾತ್ ಹಾಗು ನಿರಂಜನ್ ಕಲ್ಲುಮುಟ್ಲು ಕಾರ್ಯಕ್ರಮ ನಿರೂಪಿಸಿದರು.