ಸುಳ್ಯ:2024 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 676 ಅಂಕಗಳನ್ನು ಗಳಿಸಿ ಉನ್ನತ ಮಟ್ಟದ ಸಾಧನೆ ಮಾಡಿದ ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಥಮ್ ಶೇಖರ್ಗೆ ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಅವರು ಶಾಲು ಹೊದಿಸಿ ಹಾರ ಹಾಕಿ 10,000 ರೂಪಾಯಿ ನಗದು ಬಹುಮಾನವನ್ನಿತ್ತು ಸನ್ಮಾನಿಸಿದರು. ವಿದ್ಯಾರ್ಥಿಯ
ಉಜ್ವಲ ಶೈಕ್ಷಣಿಕ ಭವಿಷ್ಯಕ್ಕೆ ಅವರು ಶುಭ ಹಾರೈಸಿದರು.
ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಪ್ರಾಂಶುಪಾಲರಾದ ಡಾ. ಯಶೋದ ರಾಮಚಂದ್ರ ಉಪಪ್ರಾಂಶುಪಾಲರಾದ ದೀಪಕ್ ವೈ. ಆರ್, ಅಧ್ಯಾಪಕರಾದ ಭವ್ಯ ಸಿ.ಟಿ, ಅರ್ಪಿತ ಕೆ. ಎನ್ ಹಾಗೂ ರತ್ನಾವತಿ ಬಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಡಾ. ಯಶೋದ ರಾಮಚಂದ್ರ ಹಾಗೂ ಡಾ. ಉಜ್ವಲ್ ಯು.ಜೆ ರವರು ಶುಭಹಾರೈಸಿದರು. ಸನ್ಮಾನಿತರಾದ ಪ್ರಥಮ್ ಶೇಖರ್ ತಾಯಿ ಪದ್ಮಿನಿ ಶೇಖರ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ಡಾ.ಮನೋಜ್ ಅಡ್ಡಂತ್ತಡ್ಕ, ದಿನೇಶ್ ಮಡ್ತಿಲ, ಕಮಲಾಕ್ಷ ನಂಗಾರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.