ಸುಬ್ರಹ್ಮಣ್ಯ:ದ.ಕ.ಜಿಲ್ಲಾ ಇತಿಹಾಸ ಉಪನ್ಯಾಸಕರ ಸಂಘದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಳ್ಯ ಶಾರದಾ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಸನ್ನ ಎನ್.ಎಚ್ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಸಂಘದ ಅಧ್ಯಕ್ಷ ರಾಮಚಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.ಕಾರ್ಯದರ್ಶಿಯಾಗಿ ಮಂಗಳೂರಿನ ಬಿಇಎಂ ಪದವಿಪೂರ್ವ ಕಾಲೇಜಿನ ಐತಪ್ಪ.ಎಂ ನೇಮಕಗೊಂಡರು. ಉಳಿದಂತೆ
ಕಾಟಿಪಳ್ಳ ಸರಕಾರಿ ಕಾಲೇಜಿನ ಪೂರ್ಣಿಮಾ ಕಾಮತ್(ಉಪಾಧ್ಯಕ್ಷರು),ಬೆಸೆಂಟ್ ಪದವಿಪೂರ್ವ ಕಾಲೇಜಿನ ಗಾಯತ್ರಿ ಶೆಟ್ಟಿ(ಕೋಶಾಧಿಕಾರಿ), ಪುತ್ತೂರು ಸರಕಾರಿನ ಕಾಲೇಜಿನ ಮನಮೋಹನ್(ಸಂಘಟನಾ ಕಾರ್ಯದರ್ಶಿ), ಬಲ್ಮಠ ಸರಕಾರಿ ಕಾಲೇಜಿನ ಕೃಷ್ಣಯ್ಯ(ಜತೆಕಾರ್ಯದರ್ಶಿ), ಬೆಸೆಂಟ್ ವಿದ್ಯಾಲಯದ ರೂಪಾಕ್ಷ.ಎಂ(ಗೌರವಸಲಹೆಗಾರರು)ಆಯ್ಕೆಗೊಂಡರು.ತಾಲೂಕುಪ್ರತಿನಿಧಿಗಳಾಗಿ ರತ್ನಾಕರ ಸುಬ್ರಹ್ಮಣ್ಯ(ಸುಳ್ಯ,ಕಡಬ), ರೋಹಿತಾ, ಯೋಗಿತಾ, ಧರ್ಮಪಾಲ (ಮಂಗಳೂರು), ಗಿರೀಶ್ ತಂತ್ರಿ ಕಟೀಲು (ಮೂಲ್ಕಿ, ಮೂಡಬಿದ್ರೆ), ದಾಮೋದರ್(ಪುತ್ತೂರು), ಶೈಲಜಾ(ಬೆಳ್ತಂಗಡಿ), ರೇವತಿ (ಉಳ್ಳಾಲ) ನೇಮಕಗೊಂಡರು.ಮೂಡಬಿದ್ರೆ ಜೈನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಪ್ರಭಾತ್ ಬಲ್ನಾಡ್ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು.