ಸುಳ್ಯ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಹೊಸ ಸಚಿವರ ಪ್ರಮಾಣ ವಚನ ಪ್ರಯುಕ್ತ ಸುಳ್ಯದಲ್ಲಿಯೂ ಕಾಂಗ್ರೆಸ್ ಸಂಭ್ರಮಾಚರಣೆ ನಡೆಯಿತು. ಸುಳ್ಯ ಬಸ್ ನಿಲ್ದಾಣದ ಬಳಿ ದೊಡ್ಡ ಪರದೆ ಅಳವಡಿಸಿ ಪ್ರಮಾಣ ವಚನದ ನೇರ ಪ್ರಸಾರವನ್ನು ನೀಡಲಾಗಿತ್ತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರಮಾಣವಚನವನ್ನು
ವೀಕ್ಷಿಸಿದರು. ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಉಪಾಧ್ಯಕ್ಷ ಎನ್
ಜಯಪ್ರಕಾಶ್ ರೈ ರಾಜ್ಯದ ಜನತೆ ಆಶೀರ್ವಾದ ಮಾಡಿ ಪೂರ್ಣ ಬಹುಮತ ನೀಡಿದೆ. ಕಾಂಗ್ರೆಸ್ ಸರಕಾರ ಜನಪರ ಹಾಗೂ ಸ್ವಚ್ಛ ಆಡಳಿತವನ್ನು ನೀಡಲಿದೆ ಎಂದು ಹೇಳಿದರು. ಸರಕಾರದಿಂದ ಜನರಿಗೆ ದೊರಕುವ ಎಲ್ಲಾ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವ
ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಂ.ವೆಂಕಪ್ಪ ಗೌಡ, ಕೆ.ಗೋಕುಲ್ದಾಸ್, ಇಸ್ಮಾಯಿಲ್ ಪಡ್ಪಿನಂಗಡಿ, ಶಶಿಧರ ಎಂ.ಜೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಭವಾನಿಶಂಕರ ಕಲ್ಮಡ್ಕ, ಧರ್ಮಪಾಲ ಕೊಯಿಂಗಾಜೆ, ರಾಧಾಕೃಷ್ಣ ಪರಿವಾರಕಾನ, ಬಾಲಕೃಷ್ಣ ಭಟ್, ಬೆಟ್ಟ ರಾಜಾರಾಮ್ ಭಟ್, ಬೆಟ್ಟ ಜಯರಾಮ ಭಟ್, ಸತ್ಯಕುಮಾರ್ ಆಡಿಂಜ, ಚೇತನ್ ಕಜೆಗದ್ದೆ, ನಂದರಾಜ ಸಂಕೇಶ, ಮುತ್ತಪ್ಪ ಪೂಜಾರಿ, ನೌಶಾದ್ ಕೆರೆಮೂಲೆ, ಇಬ್ರಾಹಿಂ ಶಿಲ್ಪ, ಬಾಪೂಸಾಹೇಬ್, ರಾಜು ಪಂಡಿತ್, ಶ್ರೀಹರಿ ಕುಕ್ಕುಡೇಲು, ತಿರ್ಥರಾಮ ಜಾಲ್ಸೂರು, ಲೋಕೇಶ್ ಅಕ್ರಿಕಟ್ಟೆ,ಶಹೀದ್ ಪಾರೆ, ಜಂಶೀರ್ ಶಾಲೆಕ್ಕಾರ್ ಮತ್ತಿತರರು ಉಪಸ್ಥಿತರಿದ್ದರು.