ಸುಳ್ಯ:ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಗಾಂಧಿ ಜಯಂತಿ ಆಚರಣೆ ಸುಳ್ಯದ ಶಿವಕೃಪ ಕಲಾಮಂದಿರದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷರಾದ ಅಶೋಕ ಎಡಮಲೆ ವಹಿಸಿದ್ದರು.ಕಾರ್ಯಕ್ರಮವು
ಸಂವಿಧಾನ ಪೀಠಿಕೆ ವಾಚನದೊಂದಿಗೆ ಆರಂಭಗೊಂಡಿತು.ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗೋಪಾಲ್ ಪೆರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು.ಜಾನಿ ಕೆ.ಪಿ. ಮುಖ್ಯ ಭಾಷಣ ಮಾಡಿದರು. ಪಿ.ಸಿ. ಜಯರಾಮ, ದಿವಾಕರ ಪೈ, ಕೆ.ಪಿ. ಮೋಹನ್ ಕಡಬ, ಮತ್ತು ಭರತ್ ಕುಕ್ಕುಜಡ್ಕ ಮಾತನಾಡಿದರು. ವಸಂತ್ ಪೆಲತಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಕರುಣಾಕರ ಪಳ್ಳತ್ತಡ್ಕ ವಂದಿಸಿದರು.
ಈ ಸಂದರ್ಭದಲ್ಲಿ ಮಾಧವ ಸುಳ್ಯಕೋಡಿ, ಉಮ್ಮರ್ ಪಿಎ, ಲೋಲಜಾಕ್ಷ ಭೂತಕಲ್ಲು, ಮಹಮ್ಮದ್ ಕುಂಞಿ ಗೂನಡ್ಕ, ಶಿವಶಂಕರ್ ಕಡಬ, ಪ್ರಮಿಳಾ ಪೆಲ್ತಡ್ಕ, ಜೂಲಿಯಾನಾ ಕ್ರಾಸ್ತ, ಲೆಸ್ಸಿ ಮೊನಲಿಸಾ, ವಿಶ್ವನಾಥ ನೆಲ್ಲಿ ಬಂಗಾರಡ್ಕ, ಸೆಬಾಸ್ಟಿಯನ್ ಕ್ರಾಸ್ತ, ಮಂಜುನಾಥ ಮಡ್ತಿಲ, ಇಬ್ರಾಹಿಂ ಖಲೀಲ್, ಚೆನ್ನಕೇಶವ ಕಣಿಪಿಲ ಮತ್ತಿತರರು ಉಪಸ್ಥಿತರಿದ್ದರು.












