ಸುಳ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲಾ ಸದಸ್ಯರು,ಕಾಂಗ್ರೆಸ್ ಶಾಸಕರು,ಕಾಂಗ್ರೆಸ್ ಹೈ ಕಮಾಂಡ್, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ಇದ್ದಾರೆ. ಬಿಜೆಪಿ ಕುತಂತ್ರ ಫಲಿಸುವುದಿಲ್ಲ ಹಾಗೂ ಮುಖ್ಯಮಂತ್ರಿಗಳ ರಾಜಿನಾಮೆ ಪ್ರಮೇಯವೇ ಇಲ್ಲಾ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಹೇಳಿದ್ದಾರೆ.ಸಧೃಡವಾಗಿ ಸುಭದ್ರವಾಗಿ ಇರುವ
ಸಿದ್ದರಾಮಯ್ಯ ಸರ್ಕಾರವನ್ನು ತೆಗೆದು ಹಾಕಲು ಬಿಜೆಪಿ ಪಕ್ಷದವರು ರಾಜಭವನವನ್ನು ಬಳಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಬಿಜೆಪಿ ಷಡ್ಯಂತರ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಇದು ಖಂಡನೀಯ ಎಂದು ಪಾಂಬಾರು ಹೇಳಿದ್ದಾರೆ.