ಸುಳ್ಯ:ಕೊಡಗು ಜಿಲ್ಲೆಯಿಂದ ಬರುತ್ತಿರುವ 220/132 ಕೆವಿ ವಿದ್ಯುತ್ ಲೈನನ್ನು ಸುಳ್ಯಕ್ಕೆ ವಿಸ್ತರಿಸಲು ಸುಳ್ಯ ವರ್ತಕರ ಸಂಘದ ವತಿಯಿಂದ ಪ್ರಧಾನ ಮಂತ್ರಿ ಹಾಗೂ ರಾಜ್ಯ ಮುಖ್ಯಮಂತ್ರಿ ಕಾರ್ಯಾಲಯಕ್ಕೆ, ಇಂಧನ ಸಚಿವ ಕೆ ಜೆ ಜಾರ್ಜ್ ಸೇರಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸುಳ್ಯ ವರ್ತಕರ ಸಮಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ತಿಳಿಸಿದ್ದಾರೆ.
ಸುಳ್ಯದ 110 ಕೆವಿ ವಿದ್ಯುತ್ ಕಾಮಗಾರಿ ವಿಳಂಬ ವಾಗುತ್ತಿದ್ದು,ತಾಲೂಕಿನ
ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ದಿಂದ ಸಂಪಾಜೆ ವರೆಗೆ ಬರುತ್ತಿರುವ 220/132 ಕೆವಿ ಲೈನನ್ನು ಸುಳ್ಯಕ್ಕೆ ವಿಸ್ತರಿಸುವಂತೆ ಸುಳ್ಯ ವರ್ತಕರ ಸಂಘದ ವತಿಯಿಂದ ಪ್ರಧಾನ ಮಂತ್ರಿ ಯವರ ಹಾಗೂ ರಾಜ್ಯ ಮುಖ್ಯಮಂತ್ರಿ ಸೇರಿದಂತೆ ಸಂಬಂಧ ಪಟ್ಟ ಸಚಿವರಿಗೆ ಮನವಿ ಪತ್ರವನ್ನು ರವಾನಿಸಲಾಗಿದೆ. ಅಲ್ಲದೇ ಈ ಬಗ್ಗೆ ಸರಕಾರದ ಗಮನಕ್ಕೆ ನೀಡಲು ಸ್ಥಳೀಯ ಸುಳ್ಯದ ಶಾಸಕರಿಗೂ,ಕೊಡಗು ಮತ್ತು ದ.ಕ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಮತ್ತು ಮೆಸ್ಕಾಂ ಅಧಿಕಾರಿಗಳಿಗೂ ಮನವಿಯನ್ನು ನೀಡಲಾಗಿದೆ.
ಸುಳ್ಯ ತಾಲೂಕಿಗೆ ಮಾಡಾವು ಫೀಡರ್ ನಿಂದ ವಿದ್ಯುತ್ ಸಂಪರ್ಕ ಬರುತ್ತಿದ್ದು, ಈಗಾಗಲೇ ಕಾಮಗಾರಿ ಗೊಳ್ಳಲಿರುವ 110 ಕೆವಿ ಸಂಪರ್ಕದ ಕೆಲಸಕ್ಕೆ ಇನ್ನೂ ಬಹಳಷ್ಟು ಸಮಯ ಬೇಕಾಗುತ್ತದೆ ಎನ್ನಲಾಗಿದ್ದು ಸುಳ್ಯಕ್ಕೆ ಪರ್ಯಾಯವಾಗಿ ಕೊಡಗಿನ ಕುಶಾಲನಗರ ದಿಂದ ಸಂಪಾಜೆ ವರೆಗೆ ಬಂದಿರುವ 220 ಕೆವಿ ಯನ್ನು ಸುಳ್ಯಕ್ಕೆ ವಿಸ್ತರಿಸಿ ನಮ್ಮ ತಾಲೂಕಿನ ಬಹು ದೊಡ್ಡ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡ ಬೇಕೆಂದು ಮನವಿಯಲ್ಲಿ ಉಲ್ಲೇಖಿ ಸಲಾಗಿದೆ ಎಂದು ಸುಧಾಕರ ರೈ ತಿಳಿಸಿದ್ದಾರೆ.