ಸುಳ್ಯ:ಹಲವು ಗಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತ ಉಂಟಾದ ಕಾರಣ ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳು ಕತ್ತಲಲ್ಲಿ ಮುಳುಗಿದೆ. ನಿರಂತರ ವಿದ್ಯುತ್ ಕಡಿತದಿಂದಾಗಿ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಂಗಳವಾರ ಸಂಜೆಯಿಂದ ನಿರಂತರ ವಿದ್ಯುತ್ ಕಡಿತ ಉಂಟಾಗಿದ್ದು ಹಲವು

ಕತ್ತಲಲ್ಲಿ ಮುಳುಗಿರುವ ಸುಳ್ಯ ನಗರ..
ಗಂಟೆಗಳಿಂದ ವಿದ್ಯುತ್ ಮಾಯವಾಗಿದೆ. ರಾತ್ರಿ 10.45ರ ವರೆಗೂ ವಿದ್ಯುತ್ ಬಂದಿಲ್ಲ. ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಮೈನ್ ಲೈನ್ ವಿದ್ಯುತ್ ಸರಬರಾಜು ಕಡಿತಗೊಂಡಿದೆ ಎಂದು ಹೇಳಲಾಗಿದೆ.
ಮಳೆ ಆರಂಭಗೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಸುಳ್ಯ ತಾಲೂಕಿನಲ್ಲಿ ತೀವ್ರ ವಿದ್ಯುತ್ ಸಮಸ್ಯೆ ಉಂಟಾಗಿದೆ. ಸುಳ್ಯ ತಾಲೂಕು ಕೇಂದ್ರವಾದ ಸುಳ್ಯ ನಗರಕ್ಕೂ ಹಲವು ಗಂಟೆಗಳ ಕಾಲ ನಿರಂತರ ವಿದ್ಯುತ್ ಕಡಿತ ಉಂಟಾಗುತಿದೆ. ಗ್ರಾಮೀಣ ಭಾಗದಲ್ಲಿ ಹಲವು ದಿನಗಳ ವಿದ್ಯತ್ ಕಡಿತದಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.










