ಸುಳ್ಯ: ಶನಿವಾರ ಸಂಜೆ ಬೀಸಿದ ಗಾಳಿಗೆ ಮತ್ತು ಸುರಿದ ಮಳೆಗೆ ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಕಂಬ ಹಾಗೂ ಲೈನ್ಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ. ಇದರಿಂದ ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ಕಡಿತ ಸಂಭವಿಸಿದೆ. ಮೈನ್ ಲೈನ್ನಲ್ಲಿ ಕೆಲವು ಕಡೆಗಳಲ್ಲಿ
ಹಾನಿ ಉಂಟಾದ ಕಾರಣ ಸುಳ್ಯ ನಗರಕ್ಕೆ ವಿದ್ಯುತ್ ಕಡಿತಗೊಂಡಿತ್ತು. ಇದನ್ನು ಸರಿ ಪಡಿಸಿ ಸುಳ್ಯ ನಗರಕ್ಕೆ ತಡ ರಾತ್ರಿ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿದೆ. ಆದರೆ ಗ್ರಾಮೀಣ ಭಾಗಕ್ಕೆ ಇನ್ನೂ ಸಂಪರ್ಕ ಸರಿ ಪಡಿಸಲಾಗಿಲ್ಲ. ಗಾಳಿ ಮಳೆಗೆ 5 ಟಿಸಿ ಸ್ಟ್ರಕ್ಷರ್, 18 ಹೆಚ್ಟಿ ಕಂಬ, 56 ಎಲ್ಟಿ ಕಂಬಕ್ಕೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ಲೈನ್ಗಳಿಗೂ ಹಾನಿಯಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಅಜ್ಜಾವರ, ಆಲೆಟ್ಟಿ, ಕೊಡಿಯಾಲಬೈಲು, ಉಬರಡ್ಕ, ದುಗಲಡ್ಕ ಸೇರಿದಂತೆ ವಿವಿಧ ಕಡೆಗಳಲ್ಲಿ ವಿದ್ಯುತ್ ಜಾಲಕ್ಕೆ ಹಾನಿ ಸಂಭವಿಸಿದೆ. ಒಟ್ಟಿನಲ್ಲಿ ಪ್ರಥಮ ಮಳೆಗೆ ಸುಳ್ಯದ ಗ್ರಾಮೀಣ ಪ್ರದೇಶ ಕತ್ತಲಲ್ಲಿ ಕಳೆಯುವಂತಾಯಿತು. ಮರಗಳು ಬಿದ್ದು, ಕಂಬಗಳು ಕಟ್ ಆಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.










