ಸುಳ್ಯ: ಸುಳ್ಯದಲ್ಲಿ ವಿದ್ಯುತ್ ಕೈಕೊಟ್ಟಿದ್ದು ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ನಿಯತಕಾಲಿಕ ನಿರ್ವಹಣೆಯ ಹಿನ್ನಲೆಯಲ್ಲಿ ಮಂಗಳವಾರ ಬೆಳಿಗ್ಗೆ ಕರೆಂಟ್ ಕಡಿತವಾಗಿತ್ತು. ಸಂಜೆ 5 ಗಂಟೆಗೆ ಬರಬೇಕಾದ ವಿದ್ಯುತ್ 9 ಗಂಟೆಯಾದರೂ ಬಂದಿಲ್ಲ. 33 ಕೆವಿ ವಿದ್ಯುತ್ ಲೈನ್ನಲ್ಲಿ ಸಮಸ್ಯೆ ಬಂದ ಕಾರಣ ವಿದ್ಯುತ್ ಕಡಿತವಾಗಿದೆ ಸುಳ್ಯ ನಗರದ
ಬೀರಮಂಗಲದಲ್ಲಿ ತುಂಡಾದ ಕಾರಣ ವಿದ್ಯುತ್ ಕಡಿತಗೊಂಡಿದೆ, ದುರಸ್ತಿ ಕಾರ್ಯ ನಡೆಯುತಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಬೆಳಿಗ್ಗೆಯಿಂದ ವಿದ್ಯುತ್ ಕಡಿತಗೊಂಡ ಕಾರಣ ಜನರು ಪರದಾಡುವ ಸ್ಥಿತಿ ಉಂಟಾಗಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ನಗರ ಗ್ರಾಮೀಣ ಸೇರಿದಂತೆ ಎಲ್ಲೆಡೆ ಕತ್ತಲು ಆವರಿಸಿದ್ದು ಜನರು ಕತ್ತಲಲ್ಲಿ ಕಳೆಯುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.





