ಸುಳ್ಯ: 33 ಕೆವಿ ಲೈನ್ ಮೇಲೆ ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುಳ್ಯಕ್ಕೆ ವಿದ್ಯತ್ ಲೈನ್ ಹಾದು ಬರುವ ಅಮ್ಚಿನಡ್ಕದಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ. ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿದೆ. ಮರ ತೆರವು ಮಾಡಿ ವಿದ್ಯುತ್ ಸಂಪರ್ಕ ಸರಿ ಪಡಿಸುವ ಕೆಲ ನಡೆಯುತಿದೆ. ಸದ್ಯದಲ್ಲೇ
ವಿದ್ಯುತ್ ಬರಲಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಗಾಳಿ ಮಳೆಯ ಕಾರಣ ಸಂಜೆಯ ವೇಳೆಗೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಸುಳ್ಯ ನಗರ ಸೇರಿದಂತೆ ವಿವಿಧ ಕಡೆ ಕತ್ತಲಲ್ಲಿ ಕಳೆಯುವಂತಾಗಿದೆ. ಸುಳ್ಯ ನಗರ ಸೇರಿದಂತೆ ಎಲ್ಲೆಡೆ ಕತ್ತಲು ಆವರಿಸಿದೆ. ಮಳೆ ಆರಂಭವಾದ ಮೇಲೆ ಹಲವು ದಿನಗಳಿಂದ ಮರ ಬಿದ್ದು ಸುಳ್ಯಕ್ಕೆ ಸಂಪರ್ಕ ಕಡಿತಗೊಂಡಿದೆ.