ಸುಳ್ಯ: ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ಲೈನ್ನ ಮೇಲೆ ಬೃಹತ್ ಗಾತ್ರದ ಮರ ಮರ ಬಿದ್ದು ಲೈನ್ಗಳಿಗೆ ಹಾನಿಯಾಗಿರುವ ಹಿನ್ನಲೆಯಲ್ಲಿ ಸುಳ್ಯಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮಧ್ಯಾಹ್ನದ ಬಳಿಕ ಪೆರ್ನಾಜೆ ಬಳಿ ಲೈನ್ ಹಾದು
ಬರುವ ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಮರ ಲೈನ್ನ ಮೇಲೆ ಬಿದ್ದು ವಿದ್ಯುತ್ ಕಂಬಗಳಿಗೆ, ಲೈನ್ಗಳಿಗೆ ಹಾನಿಯಾಗಿದೆ. 6 ಕಂಬಗಳ ಲೈನ್ಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್ ಕಂಬ, ತಂತಿ ಹಾಗೂ ಉಪಕರಣಗಳಿಗೆ ಹಾನಿಯಾಗಿದೆ. ಇದರ ದುರಸ್ತಿ ಕಾರ್ಯ ನಡೆಯುತ್ತಿದ್ದು
ರಾತ್ರಿ 7 -8 ಗಂಟೆ ತನಕ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ.