ಸುಳ್ಯ: ಸುಳ್ಯ ನಗರ ವ್ಯಾಪ್ತಿಯ ಭಸ್ಮಡ್ಕ- ಕುಂತಿನಡ್ಕ ಪ್ರದೇಶದಲ್ಲಿ ಎರಡು ದಿನಗಳಿಂದ ನಿರಂತರ ವಿದ್ಯುತ್ ಕಡಿತ ಉಂಟಾಗಿದ್ದು ಈ ಪ್ರದೇಶಸ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಸ್ಮಡ್ಕದಲ್ಲಿ ಮಂಗಳವಾರ ಸುರಿದ ಮಳೆಗೆ ಮರದ ಗೆಲ್ಲು ಹಾಗೂ
ತೆಂಗಿನ ಮರ ವಿದ್ಯುತ್ ತಂತಿಯ ಮೇಲೆ ಬಿದ್ದಿತ್ತು. ಅದನ್ನು ತೆರವು ಮಾಡುವ ಕಾರ್ಯ ಸ್ಥಳೀಯರೇ ಮಾಡಿದ್ದರು. ಆದರೆ ವಿದ್ಯುತ್ ಸಂಪರ್ಕ ಮರುಸ್ಥಾಪನೆಗೊಂಡಿಲ್ಲ. ಸಮಸ್ಯೆಯ ಕುರಿತು ದೂರು ನೀಡಿದರೂ ಇದುವರೆಗೆ ಯಾವುದೇ ಸ್ಪಂದನೆ ಉಂಟಾಗಿಲ್ಲ. ಇದರಿಂದ ಈ ಭಾಗದ ಜನರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.