ನಿಂತಿಕಲ್ಲು:ಎಸ್ಎಸ್ಎಫ್ ನಿಂತಿಕಲ್ಲು ಸೆಕ್ಟರ್ ಸಾಹಿತ್ಯೋತ್ಸವ ಡಿಸೆಂಬರ್ 17ರಂದು ನಡೆಯಲಿದೆ. ಇದರ ಅಂಗವಾಗಿ”ಬದ್ರಿಯಾ ಜುಮಾ ಮಸೀದಿ ಕಜೆ ನಿಂತಿಕಲ್ಲು ” ಮಸೀದಿ ವಠಾರದಲ್ಲಿ ನಡೆದ ಎಸ್ಎಂಎ ‘ಮೊಹಲ್ಲಾ ಇಜ್ತಿಮಾ’ ಕಾರ್ಯಕ್ರಮದಲ್ಲಿ
ಪೋಸ್ಟರ್ ಬಿಡುಗಡೆ ನಡೆಸಲಾಯಿತು. ಕಾರ್ಯಕ್ರಮವನ್ನು ಬಹುಭಾಷಾ ವಾಗ್ಮಿ, ಎಸ್ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಉಸ್ತಾದ್ ಚಾಲನೆ ನೀಡಿದರು.ಎಸ್ಎಸ್ಎಫ್ ಸಾಹಿತ್ಯೋತ್ಸವು ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವಲ್ಲಿ ಸಹಾಯವಾಗುತ್ತದೆ ” ಎಂದು ಹೇಳಿದರು. ಜಾಫರ್ ಸಅದಿ ಪಲ್ಲತ್ತೂರು, ಅನ್ಸಾರ್ ಫಾಲಿಲಿ ಕರ್ಯಪಾಡಿ ಹಾಗೂ ಇತರ ಗಣ್ಯರು ಉಪಸ್ಥಿರಿದ್ದರು.