ತಿರುವನಂತಪುರಂ: ಮಲಯಾಳಂ ಚಲನಚಿತ್ರ ರಂಗ್ ಹಿರಿಯ ನಟ ಪೂಜಪ್ಪುರ ರವಿ(ರವೀಂದ್ರನ್ ನಾಯರ್) ಭಾನುವಾರ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಡುಕ್ಕಿ ಜಿಲ್ಲೆಯ ಮರಾಯೂರಿನಲ್ಲಿರುವ ಅವರ
ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಎನ್.ಕೆ. ಆಚಾರಿ ಅವರ ಕಲಾನಿಲಯಂ ಎಂಬ ರಂಗಭೂಮಿ ತಂಡದಿಂದ ಗುರುತಿಸಿಕೊಂಡಿದ್ದ ರವೀಂದ್ರನ್,1976ರಲ್ಲಿ ಅಮ್ಮಿಣಿ ಅಮ್ಮಾವನ್ ಚಿತ್ರದ ಮೂಲಕ ಮಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. 800ಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ಹಾಗು 4000 ನಾಟಕಗಳಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರಗಳಲ್ಲಿ ಹಾಗೂ ಪೋಷಕ ನಟನ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ಧಾರೆ.
2016ರಲ್ಲಿ ಬಿಡುಗಡೆಯಾದ ಗಪ್ಪಿ ಚಿತ್ರದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು. ಮಲಯಾಳಂ ಸಿನಿ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರ ಜೊತೆ ನಟಿಸಿದ್ದಾರೆ.