ಕಾಸರಗೋಡು:ನಿನ್ನೆ ನಡೆದ ಕೇರಳ ಸರಕಾರದ ಪೂಜಾ ಬಂಪರ್ ಲಾಟರಿ ಡ್ರಾದಲ್ಲಿ ಲಾಟರಿ ಮಾರಾಟಗಾರರಾದ ಮಂಜೇಶ್ವರದ ದಂಪತಿ ಮಾರಾಟ ಮಾಡಿದ ಲಾಟರಿ ಟಿಕೆಟ್ಗೆ ಪ್ರಥಮ ಬಹುಮಾನ 12 ಕೋಟಿ ಮತ್ತು ದ್ವಿತೀಯ ಬಹುಮಾನ 1 ಕೊಟಿ ಬಂದಿದೆ. ಮಂಜೇಶ್ವರ ಬಳಿಯ
ಹೊಸಂಗಡಿ ಮೂಲದ ಮೇರಿ ಕುಟ್ಟಿ ಜೋಜೊ ಅವರು ಮಾರಿದ ಪೂಜಾ ಬಂಪರ್ ಟಿಕೆಟಿಗೆ (JC253199) 12ಕೋ.ರೂ. ಪ್ರಥಮ ಬಹುಮಾನ ಘೋಷಣೆಯಾಗಿದೆ. ಹಾಗೆಯೇ ದ್ವಿತೀಯ ಬಹುಮಾನದ 1 ಕೋ.ರೂ.ಗಳು ಅವರ ಪತಿ ಜೋಜೊ ಜೋಸೆಫ್ ಅವರು ಮಾರಿದ ಟಿಕೆಟಿಗೆ(JD504106) ಲಭಿಸಿದೆ. ಇವರು ಭಾರತ್ ಲಾಟರಿ ಏಜೆನ್ಸಿ ಹೆಸರಿನಡಿ ಲಾಟರಿ ಟಿಕೆಟ್ ಏಜೆನ್ಸಿಗಳನ್ನು ಹೊಂದಿದ್ದು, ಅವರು ಮಂಜೇಶ್ವರ ಸಮೀಪದ ಮಜೀರ್ಪಳ್ಳದಲ್ಲಿ ಲಾಟರಿ ಅಂಗಡಿಯೊಂದನ್ನು ಹೊಂದಿದ್ದಾರೆ. ಲಾಟರಿ ವಿಜೇತರು ಇನ್ನೂ ತಮ್ಮ ಗುರುತನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.







