ಸುಳ್ಯ: ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾ ಕೂಟದಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯ ಪೊಲೀಸ್ ವೃತ್ತ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಸುಳ್ಯ ಎಸ್ಐ ಈರಯ್ಯ ದೂಂತೂರು ಹಾಗೂ


ಸುಬ್ರಹ್ಮಣ್ಯ ಎಸ್ಐ ಮುರಳೀಧರ ಅವರ ನೇತೃತ್ವದಲ್ಲಿ ಕಣಕ್ಕೆ ಇಳಿದ ಸುಳ್ಯ ಪೊಲೀಸ್ ವೃತ್ತ ತಂಡ ಪ್ರಶಸ್ತಿ ಪಡೆದು ಕೊಂಡಿದೆ. ಸೆಮಿ ಫೈನಲ್ನಲ್ಲಿ ಬಲಿಷ್ಠ ಡಿಎಆರ್ ತಂಡವನ್ನು ಮಣಿಸಿ ಪೈನಲ್ ಪ್ರವೇಶಿಸಿದ್ದ ಸುಳ್ಯ ತಂಡ ರೋಚಕ ಫೈನಲ್ನಲ್ಲಿ ಪುತ್ತೂರು ಪೊಲೀಸ್ ವೃತ್ತ ತಂಡವನ್ನು ಮಣಿಸಿ ಕಪ್ ಎತ್ತಿದೆ. ಸುಳ್ಯ ವೃತ್ತ ತಂಡದಲ್ಲಿ ಸುಳ್ಯ ಎಸ್ಐ ಈರಯ್ಯ ದೂಂತೂರು, ಸುಬ್ರಹ್ಮಣ್ಯ ಎಸ್ಐ ಮುರಳೀಧರ, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಇದ್ದರು. ಪುತ್ತೂರು ಡಿವೈಎಸ್ಪಿ ಗಾನಾ ಪಿ ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ ಉಪಸ್ಥಿತರಿದ್ದರು.









