ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇದರ ವತಿಯಿಂದ ಭೇಟಿ ಬಚಾವೊ ಭೇಟಿ ಪಡಾವೊ ಕಾರ್ಯಕ್ರಮದಡಿಯಲ್ಲಿ ಬಾಲ್ಯ ವಿವಾಹ ನಿಯಂತ್ರಣ ಮತ್ತು ನಿಷೇಧ ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೋ ಕಾಯಿದೆ) ಕುರಿತು ಅರಿವು ಕಾರ್ಯಾಗಾರ ತಾಲೂಕು ಸ್ತ್ರೀ ಶಕ್ತಿ ಭವನ ಸುಳ್ಯ ಇದರ ಸಭಾ ಭವನದಲ್ಲಿ ನಡೆಯಿತು.ಕಾರ್ಯಾಗಾರವು
ಧಾರ್ಮಿಕ ಮುಖಂಡರುಗಳು, ಸಂಘ ಸಂಸ್ಥೆಯ ಮುಖ್ಯಸ್ಥರುಗಳು ಹಾಗೂ ವಸತಿ ನಿಲಯದ ನಿಲಯ ಪಾಲಕಿಯರಿಗೆ ಈ ಒಂದು ಕಾರ್ಯಾಗಾರ ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶೈಲಜಾ ಬಿ ಇವರು ವಹಿಸಿದ್ದರು. ವಕೀಲರಾದ ರಾಮಚಂದ್ರ ಶ್ರಿಪಾದ ದೀಪ ಬೆಳಗಿಸುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಬಾಲ್ಯ ವಿವಾಹ ನಿಯಂತ್ರಣ ಮತ್ತು ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ಪ್ರಿಯಾ ರಾಜ್ ಮೊಹನ್ (ಅಡಳಿತ ಅಧಿಕಾರಿ ಸಖಿ ಸೆಂಟರ್ ಮಂಗಳೂರು) ಇವರು ಪೊಕ್ಸೊ ಕಾಯ್ದೆ ಮತ್ತು ಮಕ್ಕಳ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪಂಜ ಚಚ್೯ ಧರ್ಮಗುರುಗಳಾದ ಸೇಲಿನ್ ಡಿ.ಸೋಜಾ, ಗಾಂಧಿನಗರ ನಗರ ಮಸೀದಿ ಅಧ್ಯಕ್ಷ ಕೆ.ಎಮ್ ಮುಸ್ತಾಫ, ದೊಡ್ಡಣ್ಣ ಬರಮೇಲು, ಸುರೇಶ್ ನಡ್ಕ ಪಡ್ಪಿನಂಗಡಿ, ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಸುಹಾಸಿನಿ, ಬಾಲಕೃಷ್ಣ ನಾಯ್ಕ್ ಅಜ್ಜಾವರ, ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಷಾ ಪ್ರಸಾದ್,
ಅಬೂಬಕ್ಕರ್ ಕೆ.ಎ ಜಟ್ಟಿಪಳ್ಳ, ಇಸ್ಮಾಯಿಲ್ ಸಾಹಿಬ್ ಇಕ್ರಾ ಮಸೀದಿ, ವೆಂಕಟೇಶ ಭಟ್ಟ ಶಿವ ಕೃಪಾ ಕಲಮಂದಿರ ಸುಳ್ಯ, ಮಾಧವ ಸುಳ್ಯ ಕೋಡಿ ಶಿವ ಕೃಪ ಕಲಾಮಂದಿರ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.
ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಉಷಾ ಪ್ರಸಾದ್ ಸ್ವಾಗತಿಸಿ ವಂದಿಸಿದರು.