ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ಮತ್ತು ಸಿಂಗಪುರಕ್ಕೆ ಮೂರು ದಿನಗಳ ಅಧಿಕೃತ ಭೇಟಿಯನ್ನು ಕೈಗೊಂಡಿದ್ದಾರೆ.ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಇಂದು ಪ್ರಧಾನಿ ಮೋದಿ ಬ್ರೂನೈ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಬ್ರೂನೈ ಭೇಟಿಯು ಭಾರತದ ಪ್ರಧಾನಿಯ
ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
ನಾಳೆ (ಬುಧವಾರ) ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಎರಡು ದಿನ ಸಿಂಗಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಭೇಟಿಯ ವೇಳೆ ಬ್ರೂನೈ ಜೊತೆಗಿನ ಭಾರತದ ಐತಿಹಾಸಿಕ ಬಾಂಧವ್ಯವನ್ನು ಮುಂದುವರೆಸುವ ಮತ್ತು ಸಿಂಗಪುರದೊಂದಿಗಿನ ಅದರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಎರಡೂ ದೇಶಗಳು ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಇಂಡೋ-ಪೆಸಿಫಿಕ್ ವಿಷನ್ನಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ. ಉಭಯ ದೇಶಗಳ ಅಧ್ಯಕ್ಷರನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಮೋದಿ ಹೇಳಿದ್ದಾರೆ.