ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 100 ರೂ ಮುಖಬೆಲೆಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. 100 ರೂ ನಾಣ್ಯದಲ್ಲಿ ಭಾರತ್ ಮಾತೆ ಹಾಗೂ ಸ್ವಯಂಸೇವಕರ ಚಿತ್ರ ಇರುವುದು ವಿಶೇಷ. ಭಾರತೀಯಕರೆನ್ಸಿಯೊಂದರಲ್ಲಿ ಭಾರತ ಮಾತೆಯ
ಚಿತ್ರ ಹಾಕಲಾಗಿರುವುದು ಇದೇ ಮೊದಲು.ಈ ವಿಶೇಷ 100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನದ ಚಿತ್ರ ಇದೆ. ಮತ್ತೊಂದು ಬದಿಯಲ್ಲಿ ಸಿಂಹ ಸಮೇತ ವರದ ಮುದ್ರಾದಲ್ಲಿರುವ ಭಾರತ್ ಮಾತೆ, ಹಾಗೂ ಆಕೆಗೆ ಆರೆಸ್ಸೆಸ್ ಸ್ವಯಂಸೇವಕರು ವಂದಿಸುತ್ತಿರುವ ಚಿತ್ರ ಇದೆ.
‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತೀಯ ಕರೆನ್ಸಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ಮುದ್ರಿಸಲಾಗಿದೆ. ಈ ಕರೆನ್ಸಿಗೆ ಐತಿಹಾಸಿಕ ಮಹತ್ವ ಇದೆ. ಇದು ಹೆಮ್ಮೆಯ ಕ್ಷಣ’ ಎಂದು ನರೇಂದ್ರ ಮೋದಿ ಅವರು ನಾಣ್ಯ ಹಾಗೂ ಪೋಸ್ಟಲ್ ಸ್ಟ್ಯಾಂಪ್ ಅನಾವರಣಗೊಳಿಸಿ ಹೇಳಿದ್ದಾರೆ.ಆರೆಸ್ಸೆಸ್ 1925ರಲ್ಲಿ ಮಹಾರಾಷ್ಟ್ರದ ನಾಗಪುರ್ನಲ್ಲಿ ಸ್ಥಾಪನೆಯಾಗಿದೆ. ಈ ವರ್ಷಕ್ಕೆ ಈ ಸಂಘಟನೆ 100 ವರ್ಷ ಪೂರೈಸಿದಂತಾಗುತ್ತದೆ.ಹೀಗಾಗಿಈ ವರ್ಷ ಆರೆಸ್ಸೆಸ್ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾಣ್ಯ ಮತ್ತು ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ.












