ಸುಳ್ಯ:ಸುಳ್ಯ ನಗರದಲ್ಲಿ ರಸ್ತೆ ಬದಿಯಲ್ಲಿ ಪೈಪ್ಲೈನ್ ಕಾಮಗಾರಿ ನಡೆಸಿ ಹೊಂಡ ಮುಚ್ಚದೇ ಸಮಸ್ಯೆ ಆಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಪ್ರತಿಭಟನೆ ಘೋಷಣೆ ಮಾಡಿದ ಬೆನ್ನಲ್ಲೇ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿದ ಕಾರಣ ಪ್ರತಿಭಟನೆ ಹಿಂಪಡೆಯಲಾಗಿದೆ. ನಗರ ಹಾಗೂ ರಥಬೀದಿ ರಸ್ತೆಯ ಬಗ್ಗೆ ತುರ್ತು ಕಾಮಗಾರಿಯನ್ನು ಗುತ್ತಿಗೆದಾರರು ಕಾಮಗಾರಿ ಆರಂಭಿಸಲಾಗಿದೆ.ರಥಬೀದಿ ಭಾಗದಲ್ಲಿ
ಡಾಮರೀಕರಣ ಮತ್ತು ಗಾಂಧಿನಗರದಲ್ಲಿ ಹಿಟಾಚಿ ಮೂಲಕ ಸಮತಟ್ಟು ಮಾಡಿ ದಿನದಲ್ಲಿ 2 ಭಾರಿ ಟ್ಯಾಂಕರ್ ಮೂಲಕ ನೀರು ಹಾಕುವುದಾಗಿ ಮತ್ತು ಜಲ್ಲಿ ಹಾಕಿ ನೀರು ಹಾಹಿಸುವ ಕೆಲಸವನ್ನು ಪ್ರಾರಂಭ ಮಾಡಲಾಗಿದೆ. ಆದುದರಿಂದ ನಾಳೆ ಹಮ್ಮಿಕೊಂಡ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ. ಎಸ್ ಗಂಗಾಧರ್ ತಿಳಿಸಿದ್ದಾರೆ. ನಗರ ಪಂಚಾಯತ್ ಸದಸ್ಯರು ಹಾಗೂ ಪ್ರಮುಖರು ಮಾತುಕತೆ ನಡೆಸಿದರು. ಪಿ.ಎಸ್.ಗಂಗಾಧರ, ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಧೀರ ಕ್ರಾಸ್ತಾ, ಸಿದ್ದಿಕ್ ಕೋಕೋ, ಕೆ. ಎಂ. ಮುಸ್ತಾಫಾ, ಶಾಹಿದ್ ಪಾರೆ, ಶಿವರಾಮ ಎಂ. ಪಿ . ಉಬರಡ್ಕ ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.