ಸುಳ್ಯ: ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ 2022 – 23ನೇ ಸಾಲಿನ ವಾರ್ಷಿಕ ಮಹಾಸಭೆ ಜೂನ್ 13ರಂದು ಸುಳ್ಯ ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಎಸ್ ರಂಗಯ್ಯ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ಅಡ್ಡಂತಡ್ಕ ದೇರಣ್ಣಗೌಡ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಕಳೆದ ಸಾಲಿನ ವರದಿಯನ್ನು
ಕಾರ್ಯದರ್ಶಿ ಪ್ರೊಫೆಸರ್ ಕೆ.ವಿ ದಾಮೋದರ ಗೌಡ ವಾಚಿಸಿದರು. ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಸಂಘದ ಕೋಶಾಧಿಕಾರಿ ಎಂ ಸುಬ್ರಹ್ಮಣ್ಯ ಹೊಳ್ಳ ಮಂಡಿಸಿದರು. ಸಂಘದ ಜೊತೆ ಕಾರ್ಯದರ್ಶಿ ನೀರಬಿದ್ರೆ ನಾರಾಯಣ ಸುಳ್ಯ ರವರ ನಿರ್ವಹಣೆಯಲ್ಲಿ ರಚಿಸಲಾದ ಸಂಧ್ಯಾ ರಶ್ಮಿ 2022- 23 ವಿಶೇಷ ಸಂಚಿಕೆಯನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಸ್ಥರಾದ ಎಂ ವಿಶ್ವನಾಥ ನಾಯರ್ ಸಂಧ್ಯಾ ರಶ್ಮಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಬಗ್ಗೆ ಮಾಹಿತಿ ನೀಡಿದರು. ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಬಗ್ಗೆ ಹಿರಿಯರಾದ ಸಂಘದ ರಾಮಚಂದ್ರ ಪಲ್ಲತ್ತಡ್ಕ ಮಾಹಿತಿ ನೀಡಿದರು.
ಮುಂದಿನ ಸಾಲಿನಲ್ಲಿ ನಡೆಸಬೇಕಾದ ಕ್ರಿಯಾ ಯೋಜನೆಗಳ ಕುರಿತು ಚರ್ಚೆಗಳು ನಡೆದವು. ಕಾರ್ಯದರ್ಶಿ ಕೇ ವಿ ದಾಮೋದರ ಗೌಡ ಸಾಗತಿಸಿ ಉಪಾಧ್ಯಕ್ಷೆ ಕೋಶಾಧಿಕಾರಿ ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು.