ಕಣ್ಣೂರು: ಕೇರಳ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾ.19ರಂದು ನಾಮಪತ್ರ ಸಲ್ಲಿಸಿದರು. ಕಣ್ಣೂರು ಜಿಲ್ಲೆಯ ಧರ್ಮಡಂ ಕ್ಷೇತ್ರದಿಂದ ಅವರು ನಾಮಪತ್ರ ಸಲ್ಲಿಸಿದರು. ನಾಯಕರು ಹಾಗು
ಕಾರ್ಯಕರ್ತರ ಜೊತೆ ತಲಶ್ಯೇರಿ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸಿದ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಧರ್ಮಡಂ ಕ್ಷೇತ್ರದಿಂದ ಮೂರನೇ ಬಾರಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿಂದೆ ಕೂತುಪರಂಬ ಕ್ಷೇತ್ರದಿಂದ 3 ಬಾರಿ ಮತ್ತು ತಳಿಪರಂಬ ಕ್ಷೇತ್ರದಿಂದ ಒಮ್ಮೆ ಸ್ಪರ್ಧಿಸಿದರು.










