ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ವಿಜ್ಞಾನ ಸಂಘದ ವತಿಯಿಂದ ಮೆಗಾ ಛಾಯಾಗ್ರಹಣ ಸ್ಪರ್ಧೆಯ ಅಂತಿಮ ಹಂತ ಅ.27ರಂದು ನಡೆಸಲಾಯಿತು.ಸ್ಪರ್ಧೆಯನ್ನು ಮೂರು ಹಂತಗಳಲ್ಲಿ ನಡೆಸಲಾಗಿತ್ತು. ಮೊದಲ ಹಂತವು ವಿದ್ಯಾರ್ಥಿಗಳಲ್ಲಿ ಛಾಯಾಗ್ರಹಣ ಜ್ಞಾನವನ್ನು ಬೆಳೆಸುವ ಗುರಿಯೊಂದಿಗೆ ಆನ್ಲೈನ್ ರಸಪ್ರಶ್ನೆ ಮೂಲಕ
ನಡೆಸಲಾಯಿತು.ಎರಡನೇ ಹಂತವು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸುವ ಗುರಿಯೊಂದಿಗೆ ಕಾಲೇಜು ಉದ್ಯಾನದಲ್ಲಿ ನಡೆಯಿತು,ಈ ಹಂತದಲ್ಲಿ ವಿದ್ಯಾರ್ಥಿಗಳು ಚಿತ್ರಗಳನ್ನು ಸೆರೆಹಿಡಿಯಬೇಕು ಮತ್ತು ಅವುಗಳನ್ನು ಬಳಸಿಕೊಂಡು ಕಥೆಯನ್ನು ರಚಿಸಬೇಕು ಎಂಬ ನಿಯಮವನ್ನು ನೀಡಲಾಗಿತ್ತು.ಮೂರನೇ ಹಂತವನ್ನು ಕಾಲೇಜಿನ ದೃಶ್ಯ-ಶ್ರಾವ್ಯ ಕೋಣೆಯಲ್ಲಿ ನಡೆಸಲಾಯಿತು,ವಿದ್ಯಾರ್ಥಿಗಳು ತಾವು ಸೆರೆ ಹಿಡಿದ ಚಿತ್ರಗಳನ್ನ ಉಪಯೋಗಿಸಿಕೊಂಡು ಕಥೆಗಳನ್ನು ರಚಿಸಿದರು ಮತ್ತು ಚಿತ್ರದಲ್ಲಿ ಅಡಕವಾಗಿರುವ ವೈಜ್ಞಾನಿಕ ವಿದ್ಯಮಾನಗಳನ್ನು ವಿವರಿಸಿದರು.
ಫಲಿತಾಂಶ:
ದ್ವಿತೀಯ ಬಿಎಸ್ಸಿಯ ಸುಳ್ಯದ ಸೌಮ್ಯ ಮತ್ತು ಉಬರಡ್ಕದ ರಕ್ಷಿತ ಕೆ ತಂಡವು ಪ್ರಥಮ ಸ್ಥಾನವನ್ನು ಗಳಿಸಿದೆ.ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಮರ್ಕಂಜದ ಉಜಾನ ಕೆ ಮತ್ತು ಅಡೂರಿನ ಶಿಲ್ಪ ಎಸ್ ನಾಯ್ಕ್ ತಂಡವು ದ್ವಿತೀಯ ಸ್ಥಾನವನ್ನು ಪಡೆದಿದೆ ಹಾಗೂ ತೃತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಚೆಂಬು, ಕಲ್ಲುಗುಂಡಿಯ ಮಹಿಮ ಪಿ ಕೆ ಮತ್ತು ಕನಕಮಜಾಲಿನ ಮದಿವದಿನಿ ಟಿ ಎಸ್ ತಂಡವು ತೃತೀಯ ಸ್ಥಾನವನ್ನು ಗಳಿಸಿದೆ.
ಸ್ಪರ್ಧೆಯ ಕೊನೆಯ ಹಂತದ ಕಾರ್ಯಕ್ರಮಕ್ಕೆ ವಿಜ್ಞಾನ ಸಂಘದ ಅಧ್ಯಕ್ಷ ಚರಣ್ ಎಂ ಸ್ವಾಗತಿಸಿದರು. ಉಪನ್ಯಾಸಕರಾದ ಹರ್ಷಕಿರಣ (ರಸಾಯನಶಾಸ್ತ್ರ ವಿಭಾಗ), ಅಶ್ವಿನಿ ಕೆ ಸಿ (ಭೌತಶಾಸ್ತ್ರ ವಿಭಾಗ), ತೃಪ್ತಿ(ಗಣಿತ ವಿಭಾಗ), ಶ್ರೀಮತಿ ದೀಕ್ಷಾ(ಕಂಪ್ಯೂಟರ್ ವಿಜ್ಞಾನ ವಿಭಾಗ) ಕುಲದೀಪ್ ಪೆಲತ್ತಡ್ಕ (ಸಸ್ಯಶಾಸ್ತ್ರ ವಿಭಾಗ) ಮತ್ತು ಕೃತಿಕಾ(ಸಸ್ಯಶಾಸ್ತ್ರ ವಿಭಾಗ) ತೀರ್ಪುಗಾರರಾಗಿದ್ದರು.
ಕಾರ್ಯಕ್ರಮದಲ್ಲಿ ಗಣಿತ ಉಪನ್ಯಾಸಕಿ ಉಷಾ ಎಂ ಪಿ,ಕಚೇರಿ ಸಿಬ್ಬಂದಿ ಶಿವಣ್ಣ ಉಪಸ್ಥಿತರಿದ್ದರು.ವಿಜ್ಞಾನ ಸಂಘದ ಕಾರ್ಯದರ್ಶಿ ಕೀರ್ತಿಕಾ ಟಿ ವಂದಿಸಿದರು.