ಸುಳ್ಯ:ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸುಳ್ಯ ವಲಯದ ವತಿಯಿಂದ ಇತ್ತೀಚೆಗೆ ನಿಧನರಾದ ವಲಯದ ಸದಸ್ಯ ನಾರಾಯಣ ಕಾಯರ್ತೋಡಿ ಇವರ ಕುಟುಂಬಕ್ಕೆ ಧನಸಹಾಯವನ್ನು ಹಸ್ತಾಂತರ ಮಾಡಲಾಯಿತು.ವಲಯದ ಸದಸ್ಯರಿಂದ
ಸಂಗ್ರಹಿಸಿದ ಮೊತ್ತ ರೂ 19050/-ಅನ್ನು ಅವರ ಮನೆಗೆ ತೆರಳಿ ವಲಯದ ಅಧ್ಯಕ್ಷರಾದ ಶಶಿ ಗೌಡ ಇವರ ನೇತೃತ್ವದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಪರಮ್, ಪ್ರಶಾಂತ್ ಶೇಣಿ,ವಸಂತಿ ಹರೀಶ್ ರಾವ್, ಶಿವಕುಮಾರ್, ಶ್ರೀಮತಿ ಈಶ್ವರಿ ರಾಧಾಕೃಷ್ಣ ಮತ್ತು ರಾಧಾಕೃಷ್ಣಕೊನಾರ್ಕ್,ಶಿವಪ್ರಸಾದ್ ರೈ, ಕಿರಣ್ ಕುಮಾರ್ ಎಂ ಜಿ ಮತ್ತು ರಮೇಶ್ ಪ್ರೊಫೈಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





