ಸುಳ್ಯ:ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ. ರಿಸರ್ಚ್ ಸೆಂಟರ್ ನಲ್ಲಿ ಸ್ಕಾಲರ್ ಆಗಿದ್ದ ಸೀಮಾ ಸಕ್ಸೇನಾ ಅವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ.ಕಾಲೇಜಿನ ಮ್ಯಾನೇಜ್ಮೆಂಟ್ ಸ್ಟಡೀಸ್ ಗೈಡ್ ಡಾ. ಸುರೇಖಾ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ
“ORGANISATIONAL ERGONOMICS AND EMPLOYEE SATISFACTION: ISSUES, INFLUENCES AND INSIGHTS- A STUDY WITH REFERENCE TO THE SELECTED SERVICE ORGANISATIONS IN UDUPI DISTRICT” ಎಂಬ
ಮಹಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಇವರು ಪ್ರಸ್ತುತ ಬ್ರಹ್ಮಾವರ ವಿಜಯಲಕ್ಷ್ಮಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ಸೀಮಾ ಸಕ್ಸೇನಾರನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರಾದ ಡಾ. ಸುರೇಶ್ ವಿ. ಅಭಿನಂದಿಸಿದ್ದಾರೆ.