ತಿರುವನಂತಪುರಂ: ಕೇರಳ ರಾಜ್ಯ ಬಜೆಟ್ ಇಂದು ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಮಂಡಿಸಿದರು. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂ. ಏರಿಕೆಯಾಗುವುದು ಬಜೆಟ್ನ ಮುಖ್ಯಾಂಶಗಳಲ್ಲೊಂದು. 2023-24ನೇ ಸಾಲಿನ ಬಜೆಟ್ ಪೆಟ್ರೋಲ್, ಡೀಸೆಲ್ ಮೇಲೆ ಸಾಮಾಜಿಕ ಭದ್ರತಾ ಸೆಸ್ ವಿಧಿಸಲಾಗುವುದು ಎಂದು

ಘೋಷಿಸಲಾಗಿದೆ. ಏಪ್ರಿಲ್ ಒಂದರಿಂದ ಈ ಸೆಸ್ ಜಾರಿಯಾಗಲಿದೆ.
ಕೇರಳ-ಕರ್ನಾಟಕ ರಾಜ್ಯದಲ್ಲಿ ಭಾರೀ ಅಂತರ:
ಇಂಧನ ದರದಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಭಾರೀ ದರ ವ್ಯತ್ಯಾಸ ಇದೆ. ಕೇರಳದ ಕಾಸರಗೋಡಿನಲ್ಲಿ ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.80 ರೂ. ಇದ್ದರೆ ಡೀಸೆಲ್ ಬೆಲೆ 95.69 ರೂ ಇದೆ. ಸುಳ್ಯದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 101.99 ರೂ, ಡೀಸೆಲ್ಗೆ ರೂ. 87.991ಇದೆ. ಹೊಸ ಸೆಸ್ ಜಾರಿ ಆದರೆ ಕೇರಳದಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಈಗಾಗಲೇ ಕೇರಳದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಪೆಟ್ರೊಲ್ಗೆ 6 ರೂ ಹಾಗು ಡೀಸಿಲ್ಗೆ ಸುಮಾರು 8 ರೂ ಅಧಿಕ ಇದೆ.ಹೊಸ ದರ ಜಾರಿಯಾದರೆ ಅಂತರ ಮತ್ತಷ್ಟು ಏರಲಿದೆ. ಕಳೆದ ವರ್ಷ ಕರ್ನಾಟಕ ದರ ಕಡಿತ ಮಾಡಿತ್ತು. ಆದರೆ ಕೇರಳದಲ್ಲಿ ದರ ಕಡಿತ ಮಾಡದ ಕಾರಣ ಈ ದರ ವ್ಯತ್ಯಾಸ ಜಾರಿಯಲ್ಲಿದೆ.