ಸುಳ್ಯ: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಕಳಿಯಾಟ ಮಹೋತ್ಸವಕ್ಕೆ ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗ ಸೇವಾ ಸಂಘದ ವತಿಯಿಂದ ಹಸಿರುವಾಣಿ ಸಮರ್ಪಿಸಿದರು.ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಿಂದ ಮೆರವಣಿಗೆ ನಡೆಸಿ ಹಸಿರುವಾಣಿ ಸಮರ್ಪಿಸಿದರು. ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ

ಮಾ.1ರಿಂದ ಆರಂಭಗೊಂಡಿದ್ದು ಮಾ.7ರ ತನಕ ನಡೆಯುತ್ತಿದೆ. ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು, ಸಮಾಜ ಬಾಂಧವರು ಸೇರಿದ್ದರು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ಮುಂಭಾಗದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಶಂಕರಪಾಟಾಳಿಯವರು ತೆಂಗಿನಕಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು. ಸುಳ್ಯ ತಾಲೂಕು ಪಾಟಾಳಿ ಯಾನೆ ಗಾಣಿಗ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಉದ್ದಂತಡ್ಕ ಹಾಗೂ ಪದಾಧಿಕಾರಿಗಳು ಇದ್ದರು. ಹಸಿರುವಾಣಿ ತುಂಬಿದ ವಾಹನಗಳು ಮೆರವಣಿಗೆಯಲ್ಲಿ ಸಾಗಿ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.







