ಪೆರುವಾಜೆ: ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ಪ್ರಾರಂಭಗೊಂಡಿದ್ದು ಇಂದು ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಭವ್ಯ ಮೆರವಣಿಗೆಯ ಮೂಲಕ ಹೊರೆ ಕಾಣಿಕೆ ಸಮರ್ಪಿಸಲಾಯಿತು.ಸಂಜೆ ಬೆಳ್ಳಾರೆಯ

ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಬಳಿಯಿಂದ ಹಸಿರು ವಾಣಿ ಮೆರವಣಿಗೆ ಹೊರಟಿತು. ಮುಖ್ಯರಸ್ತೆಯಲ್ಲಿ ಸಾಗಿದ ಮೆರವಣಿಗೆಗೆ ವಿವಿಧ ವೇಷ ಭೂಷಣಗಳು, ಚೆಂಡೆ, ವಾದ್ಯ ಮೇಳಗಳು ಸಾಥ್ ನೀಡಿದವು. ಅಲ್ಲಲ್ಲಿ ಮೆರವಣಿಗೆಗೆ ಭವ್ಯ ಸ್ಬಾಗತ ನೀಡಲಾಯಿತು. ಹಲವು ವಾಹನಗಳಲ್ಲಿ ಹಸಿರುವಾಣಿ ಮೆರವಣಿಗೆ ಸಾಗಿ ಬಂದು ದೇವಾಲಯಕ್ಕೆ ಸಮರ್ಪಿಸಲಾಯಿತು.













