ಪೆರುವಾಜೆ:ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯ ಹೂವಿನ ರಾಶಿ ಹೊದ್ದು ಭಕ್ತ ಸಮೂಹದ ಗಮನ ಸೆಳೆಯುತ್ತಿದೆ! ಗರ್ಭಗುಡಿ, ಗಣಪತಿ ಗುಡಿ, ಒಳಾಂಗಣ, ಹೊರಾಂಗಣ ಗೋಡೆಗಳು, ಛಾವಣಿ ಹೀಗೆ ದೇವಾಲಯದ ಎಲ್ಲಾ ಭಾಗಗಳೂ ಬಣ್ಣ- ಬಣ್ಣದ, ಬಗೆ-ಬಗೆ ಹೂವುಗಳು ನಳನಳಿಸುತ್ತಿವೆ. ದೇವಾಲಯ ಪೂರ್ತಿ

ಹೂವುಗಳೇ ರಾರಾಜಿಸುತ್ತಿದ್ದು ದೇವಾಲಯದಲ್ಲಿ ಹೂವುಗಳ ರಾಶಿಯೇ ಮೈದಳೆದಂತಿದೆ.
ಪೆರುವಾಜೆ ಶ್ರೀ ಜಲದುರ್ಗಾದೇವಿಯ ಭಕ್ತ, ಪೆರುವಾಜೆ ಗ್ರಾಮದ ನಿವಾಸಿ, ಮಂಗಳೂರಿನ ಐರಿಷ್ ಫ್ಲವರ್ ಸ್ಟಾಲ್ ಮಾಲಕ ಉಮೇಶ್ ಕೊಟ್ಟೆಕಾೖ ಮತ್ತು ಅವರ ಮನೆ ಮಂದಿ ಪ್ರತಿ ವರ್ಷ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸುತ್ತಾರೆ. ಹಲವು ವರ್ಷಗಳಿಂದ ಸೇವೆ ಮಾಡುವ

ಉಮೇಶ್ ಮತ್ತು ಅವರ ಕುಟುಂಬ 2006ರಿಂದ ಈ ಸೇವೆ ಆರಂಭಿಸಿದ್ದು, 2016ರ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕೂಡ ದೇವಾಲಯವನ್ನು ಹೂವಿನಿಂದ ಶೃಂಗರಿಸಿದ್ದರು. ಪ್ರತಿ ಬಾರಿಯು ಕಳೆದ ವರ್ಷಕ್ಕಿಂತ ಹೆಚ್ಚು-ಹೆಚ್ಚು ಹೂವು ಅರ್ಪಿಸಿದ್ದಾರೆ.












