ಬೆಳ್ಳಾರೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತ್ತು. ಶ್ರೀ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ನೇಮ ನಡೆಯಿತು.ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ
ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್., ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಉಮೇಶ್ ಕೆಎಂಬಿ, ನಿರಂಜನ ಶೆಟ್ಟಿ, ಮಾಜಿ ಸದಸ್ಯ ಬೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಅಮರನಾಥ ಶೆಟ್ಟಿ ಪೆರುವಾಜೆಗುತ್ತು, ಉಮೇಶ್ ಕೊಟ್ಟೆಕಾಯಿ, ಕುಂಬ್ರ ದಯಾಕರ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ದೇವಿಯ ಇಚ್ಛೆಯಂತೆ ನಡೆದಿದೆ : ಪದ್ಮನಾಭ ಶೆಟ್ಟಿ
ಕಳೆದ ಹದಿನೈದು ದಿನಗಳಿಗಿಂತ ಹೆಚ್ಚು ಕಾಲ ನೂರಾರು ಮಂದಿ ಸ್ವಯಂಸೇವಕರು ಕ್ಷೇತ್ರದಲ್ಲಿ ಶ್ರಮದಾನ ನಡೆಸಿದ್ದಾರೆ. ಹಲವಾರು ಮಂದಿ ಬೇರೆ-ಬೇರೆ ವಿಭಾಗದಲ್ಲಿ ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ವಾರ್ಷಿಕ ಜಾತ್ರೆ, ಬ್ರಹ್ಮರಥೋತ್ಸವವು ಅಭೂತಪೂರ್ವ ರೀತಿಯಲ್ಲಿ ನಡೆದಿದೆ. ಎಲ್ಲವೂ ತಾಯಿ ಜಲದುರ್ಗೆಯ ಇಚ್ಛೆಯಂತೆ ನಡೆದಿದೆ. ಜಾತ್ರೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿರುವೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ
ಪದ್ಮನಾಭ ಶೆಟ್ಟಿ ಪೆರುವಾಜೆ ಹೇಳಿದ್ದಾರೆ.












