ಪೆರುವಾಜೆ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಜ.19 ರಂದು ಶ್ರೀ ದೇವಿಗೆ ಬ್ರಹ್ಮರಥೋತ್ಸವದ ಬಳಿಕ ಶಯನೋತ್ಸವ ನಡೆಯಲಿದ್ದು ದೇವಿಗೆ ಪ್ರಿಯವಾದ ಮಲ್ಲಿಗೆ ಮಾಲೆ ಸಮರ್ಪಿಸಲು ಅವಕಾಶ ಇದೆ. ಭಕ್ತರು ಮಲ್ಲಿಗೆ ಮಾಲೆ ಸಮರ್ಪಿಸಿ ಶ್ರೀ ದೇವಿಯ ಕೃಪೆಗೆ
ಪಾತ್ರರಾಗುವಂತೆ ಈ ಮೂಲಕ ವಿನಂತಿಸುವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ. ಪದ್ಮನಾಭ ಶೆಟ್ಟಿ ಪೆರುವಾಜೆ ವಿನಂತಿಸಿದ್ದಾರೆ.
ಗುರುವಾರ ರಾತ್ರಿ ದೇವಸ್ಥಾನ ದೀಪೋತ್ಸವದ ಪ್ರಭೆಯಲ್ಲಿ ಕಂಗೊಳಿಸಿತ್ತು. ಅಲ್ಲದೆ ದೇವಾಲಯವನ್ನು ಪುಷ್ಪಾಲಂಕಾರ ಮಾಡಲಾಗಿದ್ದು ಮನ ಸೆಳೆಯುತ್ತಿತ್ತು.












