ಕಲ್ಲುಗುಂಡಿ: ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ, ಪ್ರತಿಷ್ಠಿತ ಸಿರಾಜುಲ್ ಹುದಾ ವಿದ್ಯಾಸಂಸ್ಥೆ ಕುಟ್ಯಾಡಿ ಇದರ ಸಾರಥಿ, ಪ್ರಮುಖ ವಿದ್ವಾಂಸ, ಸುಪ್ರಸಿದ್ಧ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಏ.29 ರಂದು ಕಲ್ಲುಗುಂಡಿ ಸುನ್ನೀ ಸೆಂಟರ್ಗೆ
ಭೇಟಿ ನೀಡಿ ದುಆಶೀರ್ವಚನಗೈದರು. ಕಲ್ಲುಗುಂಡಿ, ಸಂಪಾಜೆ, ಕೊಯನಾಡು ಮತ್ತು ಗೂನಡ್ಕದಿಂದ ಹಲವಾರು ಎಸ್ಸೆಸ್ಸೆಫ್, ಎಸ್. ವೈ. ಎಸ್, ಮುಸ್ಲಿಂ ಜಮಾಅತ್ ಕಾರ್ಯಕರ್ತರು ಜಮಾಯಿಸಿ ಉಸ್ತಾದರನ್ನು ಸ್ವಾಗತಿಸಿದರು.ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಸುನ್ನೀ ಸೆಂಟರ್ ಕಾರ್ಯಾಚರಿಸುತ್ತಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಪ್ರತಿಭಾ ಪುರಸ್ಕಾರ, ಇಫ್ತಾರ್ ಸಂಗಮ, ಮಹ್ಲರತುಲ್ ಬದ್ರಿಯಾ ಸೇರಿದಂತೆ ಹಲವಾರು ಕಾರ್ಯಾಚರಣೆಗಳಿಗೆ ಸುನ್ನೀ ಸೆಂಟರ್ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.